ಮದುವೆ ಮನೆ ಊಟ ತಂದ ಸಂಕಷ್ಟ: ರಸ್ತೆಯಿಡೀ ವಾಂತಿ, ಭೇದಿ: ವಧುವರ, ಅತಿಥಿಗಳು ಅಸ್ವಸ್ಥ
ಅಹ್ಮದಾಬಾದ್: ಮದುವೆ ಮನೆಯಲ್ಲಿ ಊಟ ಮಾಡಿದ ಬಳಿಕ ವಧು—ವರ ಸೇರಿದಂತೆ ಅತಿಥಿಗಳು ಅಸ್ವಸ್ಥರಾದ ಘಟನೆ ಅಹ್ಮದಾಬಾದ್– ವಡೋದರಾದಲ್ಲಿ ನಡೆದಿದೆ.
ಗುಜರಾತ್ ನ ರಾಜ್ ಪಿಫ್ಲಾದ ವರ ಹಿಮಾಂಶು ವಿವಾಹ ಅಹ್ಮದಾಬಾದ್ ನಲ್ಲಿ ಅದ್ದೂರಿಯಾಗಿ ನೆರವೇರಿತ್ತು. ಮದುವೆ ಸಂಭ್ರಮದಲ್ಲಿ ವಧುವರ ಮತ್ತು ಅತಿಥಿಗಳು ಊಟ ಮಾಡಿ ಬಸ್ ನಲ್ಲಿ ತಮ್ಮ ಊರಿಗೆ ತೆರಳಿದ್ದರು.
ದಾರಿ ಮಧ್ಯೆ ಒಬ್ಬರಾದ ಬಳಿಕ ಮತ್ತೊಬ್ಬರು ವಾಂತಿ ಮಾಡಿಕೊಂಡಿದ್ದು, ಹಲವರಿಗೆ ಹೊಟ್ಟೆ ನೋವು, ಭೇದಿಯಾಗಿದೆ. ಹೀಗಾಗಿ ಅಹ್ಮದಾಬಾದ್-ವಡೋದರಾ ಎಕ್ಸ್ ಪ್ರೆಸ್ ಹೆದ್ದಾರಿಯ ನಾಡಿಯಾಡ್ ಟೋಲ್ ಬಳಿ ಬಸ್ ನ್ನು ನಿಲ್ಲಿಸಿ 108 ತುರ್ತು ಆ್ಯಂಬುಲೆನ್ಸ್ ಗೆ ಕರೆ ಮಾಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಸ್ವಸ್ಥರಾಗಿದ್ದರಿಂದಾಗಿ ಮದುವೆ ಮೆರವಣಿಗೆ ಬಸ್ ನಲ್ಲೇ ಆಸ್ಪತ್ರೆಗೆ ಸಾಗಿಸಲಾಯಿತು. ವಧು ಹಾಗೂ ವರ ಕೂಡ ಕಾರಿನಲ್ಲಿ ನಾಡಿಯಾಡ್ ಸಿವಿಲ್ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಏಕಾಏಕಿ ಉಂಟಾದ ಸ್ಥಿತಿಯಿಂದಾಗಿ ರಸ್ತೆಯಿಡೀ ಅತಿಥಿಗಳು ವಾಂತಿ ಭೇದಿ ಮಾಡಿದ್ದಾರೆ.
ತಕ್ಷಣವೇ ಆಸ್ಪತ್ರೆಗೆ ತಲುಪಿ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕಿದ ಕಾರಣ ಕೆಲವೇ ಗಂಟೆಗಳಲ್ಲಿ ಎಲ್ಲರೂ ಚೇತರಿಸಿಕೊಂಡಿದ್ದು, ಆರೋಗ್ಯ ಸುಧಾರಿಸಿದ ಬಳಿಕ ಅತಿಥಿಗಳು ತಮ್ಮ ಊರಿಗೆ ಪ್ರಯಾಣ ಆರಂಭಿಸಿದ್ದಾರೆ.

























