ಮಣಿಪುರ: ಅರ್ಹ ಕುಟುಂಬಗಳಿಗೆ ರಮಾಝಾನ್ ಆಹಾರ ಕಿಟ್ ವಿತರಣೆ

ಉಡುಪಿ: ಕುವೈಟ್ ಮಣಿಪುರ ಮುಸ್ಲಿಮ್ ಅಸೋಶಿಯೇಷನ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಅರ್ಹ ಕುಟುಂಬಗಳಿಗೆ ರಮಾಝಾನ್ ಪ್ರಯುಕ್ತ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ವಿತರಿಸಲಾಯಿತು.
ಸಂಘದ ಗೌರವಾಧ್ಯಕ್ಷ ಸೈಯ್ಯದ್ ಅಹಮದ್ ಮಣಿಪುರ, ಅಧ್ಯಕ್ಷರು ಜಮಾಲ್ ಮಣಿಪುರ, ಉಪಾಧ್ಯಕ್ಷರು ಕರೀಮ್ ಉಚ್ಚಿಲ ನೇತೃತ್ವದಲ್ಲಿ ಸಂಘದ ಸರ್ವ ಸದಸ್ಯರುಗಳ ಸಹಕಾರದಿಂದ ರಮಝಾನ್ ಕಿಟ್ಟಿನ ವ್ಯವಸ್ಥೆ ಮಾಡಲಾಯಿತು.
ಸದರ್ ಇಲ್ಯಾಸ್ ಅಲರಿ ಉಸ್ತಾದ್ ದುವಾ ನೆರವೇರಿಸಿದರು. ಸಂಘದ ಕೋಶಾಧಿಕಾರಿ ಶಂಶುದ್ಧೀನ್, ಮಜೀದ್ ಬಿರಾಲಿ ಉಚ್ಚಿಲ, ರಫೀಕ್ ಸಾಬ್ ಮಣಿಪುರ, ಸಲಾಂ ಮಣಿಪುರ, ಹಾರಿಸ್ ಸಂಸು ಮಣಿಪುರ, ಆಸಿಫ್ ಕೆ.ಎಂ., ಹಂಝ ಪೊಣ್ಣಾನಿ ಮೊದಲಾದವರು ಉಪಸ್ಥಿತರಿದ್ದರು. ಸಂಸ್ಥೆಯು ಕಳೆದ18 ವರ್ಷಗಳಿಂದ ಜನಪರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw