ನಾಯಿ ಮಾಂಸ ಮಾರಾಟ ನಿಷೇಧ: ನಾಯಿ ವ್ಯಾಪಾರಿಗಳಿಂದ ತೀವ್ರ ಪ್ರತಿಭಟನೆ!

ದಕ್ಷಿಣ ಕೊರಿಯಾದ ಪ್ರಾಚೀನ ಆಹಾರ ಪದ್ಧತಿಯಾದ ‘ನಾಯಿ ಮಾಂಸ’ದ ನಿಷೇಧಕ್ಕೆ ದಕ್ಷಿಣ ಕೊರಿಯಾ ಸರ್ಕಾರ ಮುಂದಾಗಿದ್ದು, ನಾಯಿ ಮಾಂಸ ನಿಷೇಧಿಸುವ ಮಸೂದೆಯೊಂದನ್ನು ಅಂಗೀಕರಿಸಿದೆ.
ಇಂದು ನಡೆದ ಸಂಸತ್ ಸಭೆಯಲ್ಲಿ ಈ ನೂತನ ಮಸೂದೆ ಮಂಡನೆಯಾಗಿದ್ದು, 208-0 ಮತಗಳಿಂದ ಈ ಮಸೂದೆಯನ್ನು ಅಂಗೀಕರಿಸಲಾಗಿದೆ.
ದಕ್ಷಿಣ ಕೊರಿಯಾದ ಅಧ್ಯಕ್ಷರಾದ ಯೂನ್ ಸುಕ್ ಯೆಲ್ ಅವರು ಸಹಿ ಹಾಕಿದ ನಂತರ ಈ ನೂತನ ಕಾನೂನು ಜಾರಿಯಾಗಲಿದೆ.
ಈ ನೂತನ ಕಾನೂನಿನ ಪ್ರಕಾರ ಮನುಷ್ಯರ ಆಹಾರವಾಗಿ ನಾಯಿಯನ್ನು ಸಾಕುವುದು, ವಧೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಈ ಕಾನೂನನ್ನು ಉಲ್ಲಂಘಿಸಿ ನಾಯಿ ವಧೆ ಮಾಡಿದ್ರೆ, ಅಂತಹವರಿಗೆ 2ರಿಂದ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಅವಕಾಶ ಮಸೂದೆಯಲ್ಲಿದೆ.
ಇನ್ನೊಂದೆಡೆ ನಾಯಿ ಮಾಂಸ ಮಾರಾಟ ನಿಷೇಧದ ಸರ್ಕಾರದ ಕ್ರಮದ ವಿರುದ್ಧ ರೈತರು ಹಾಗೂ ನಾಯಿ ವ್ಯಾಪಾರಿಗಳು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:
Click: ಮಗನನ್ನು ಹತ್ಯೆ ಮಾಡಿ ಬ್ಯಾಗಿನಲ್ಲಿಟ್ಟುಕೊಂಡು ಸಾಗಿಸುತ್ತಿದ್ದ ಮಹಿಳೆ ಅರೆಸ್ಟ್
Click: ಅಯ್ಯಪ್ಪ ಮಾಲಾಧಾರಿಗಳ ಕಾರು ಭೀಕರ ಅಪಘಾತ: ಇಬ್ಬರು ಸಾವು
Click: ನನಗೆ ಹುಟ್ಟುಹಬ್ಬ ಅಂದ್ರೆನೇ ಅಸಹ್ಯ ಅನ್ನಿಸಿ ಬಿಟ್ಟಿದೆ: ನಟ ಯಶ್
Click: ಬೆಳ್ಳುಳ್ಳಿ ಸೇವನೆಯಿಂದಾಗುವ ಆರೋಗ್ಯದ ಲಾಭಗಳೇನು ? | ಇಲ್ಲಿದೆ ಮಾಹಿತಿ