10:12 PM Saturday 23 - August 2025

ಗಾಝಾದಲ್ಲಿ ಇಸ್ರೇಲ್ ತಕ್ಷಣ ಯುದ್ಧ ನಿಲ್ಲಿಸಬೇಕು: ಡೊನಾಲ್ಡ್ ಟ್ರಂಪ್ ಗರಂ

27/03/2024

ಇಸ್ರೇಲ್ ತಕ್ಷಣವೇ ಗಾಝಾದಲ್ಲಿ ಯುದ್ಧ ಕೊನೆಗೊಳಿಸಬೇಕು ಎಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ಬಗ್ಗೆ ಯಾವುದೋ ರೀತಿಯಲ್ಲಿ ಪ್ರತಿಕ್ರಿಯಿಸಬಹುದಿತ್ತು. ಇಸ್ರೇಲ್ ಇಂದು ಅಂತರರಾಷ್ಟ್ರೀಯ ಬೆಂಬಲ ಕಳೆದುಕೊಳ್ಳುತ್ತಿದೆ ಎಂಬುದು ಟ್ರಂಪ್ ಅಭಿಪ್ರಾಯವಾಗಿದೆ.

ದಕ್ಷಿಣ ಇಸ್ರೇನ್ ನ ಮೇಲೆ ಹಮಾಸ್ ದಾಳಿ ನಡೆಸಿ ಹಲವು ಮಂದಿಯ ಜೀವಹಾನಿಗೆ ಕಾರಣವಾಗಿರುವುದು, ನಾನು ಇದುವರೆಗ ನೋಡಿದ ಅತ್ಯಂತ ಬೇಸರದ ಘಟನೆಗಳಲ್ಲೊಂದು. ಆದರೆ ಇದೀಗ ಇಸ್ರೇಲ್ ಯುದ್ಧ ಕೊನೆಗೊಳಿಸಬೇಕು. ಬೇರೆ ಕಾರ್ಯಗಳನ್ನು ಮಾಡಬೇಕಿರುವುದರಿಂದ ಈ ಯುದ್ಧ ಕೊನೆಗೊಳಿಸಿ ಎಂದು ಅವರು ಮನವಿ ಮಾಡಿದ್ದಾರೆ.

ಇಸ್ರೇಲ್ ಹಯೋಮ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪತ್ರಿಕೆಯ ವೆಬ್ ಸೈಟ್ ನಲ್ಲಿ ಟ್ರಂಪ್ ಸಂದರ್ಶನ ಪೋಸ್ಟ್ ಮಾಡಲಾಗಿದೆ.
ಅಕ್ಟೋಬರ್ 7ರಂದು ಹಮಾಸ್ ಗಾಝಾದಲ್ಲಿ ದಾಳಿ ನಡೆಸಿ ಆರು ತಿಂಗಳು ಕಳೆದಿದ್ದು, ಹಮಾಸ್ ಸಂಘಟನೆಯನ್ನು ನಿರ್ಮೂಲನೆ ಮಾಡುವವರೆಗೂ ಹೋರಾಟ ಮುಂದುವರಿಸುವುದಾಗಿ ಇಸ್ರೇಲ್ ಹೇಳಿಕೊಂಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version