3:33 AM Saturday 13 - December 2025

ದುಬೈನಲ್ಲಿ ನಿಗೂಢವಾಗಿ ಮೃತಪಟ್ಟ ಕರಾವಳಿಯ ಯುವಕ!

10/03/2021

ವಿಟ್ಲ:  ಬೋಳಂತೂರು ನಾರ್ಶದ ನಿವಾಸಿ ಸೂಫಿ ಮುಕ್ರಿಕರ ಎಂಬವರ ಪುತ್ರ ದುಬೈನಲ್ಲಿ ನಿಗೂಢವಾಗಿ ಮೃತಪಟ್ಟಿದ್ದು, ಮೊಬೈಲ್ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಕ್ಕೀಡಾಗಿದ್ದ ಸಂದರ್ಭದಲ್ಲಿಯೇ ಕುಟುಂಬಕ್ಕೆ ಶಾಕಿಂಗ್ ನ್ಯೂಸ್ ಸಿಕ್ಕಿದೆ.

ಮುತ್ತಲಿಬ್  ಎಂಬವರು ಮೃತಪಟ್ಟವರಾಗಿದ್ದಾರೆ. ದುಬೈನ ಅಲ್-ರಫಾದಲ್ಲಿ ಭಾನುವಾರ ಅವರ ಮೃತದೇಹ ಪತ್ತೆಯಾಗಿತ್ತು.ಇಲ್ಲಿನ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಮುತ್ತಲಿಬ್ ಅವರ ಪಾಸ್‌ಪೋರ್ಟ್ ಸಂಖ್ಯೆ ಆಧರಿಸಿ, ಭಾರತೀಯ ಪ್ರಜೆ ಎಂದು ಖಚಿತ ಪಡಿಸಿಕೊಂಡ ಅವರು, ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದ್ದರು.

ಮೃತದೇಹ ಪತ್ತೆಗೆ ಕರ್ನಾಟಕ ಕಲ್ಚರಲ್ ಫೋರಂ ಸಹಕಾರ ನೀಡಿತ್ತು. ಅದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಡಳಿತದ ಮೂಲಕ ವಿಳಾಸ ಪತ್ತೆ ಹಚ್ಚ ಲಾಯಿತು. ಮೃತದೇಹ ದುಬೈನ ರಾಶೀದ್ ಆಸ್ಪತ್ರೆಯಲ್ಲಿದೆ.

ಇತ್ತೀಚಿನ ಸುದ್ದಿ

Exit mobile version