4:41 AM Wednesday 15 - October 2025

ದುನಿಯಾ ವಿಜಯ್ ಮದುವೆಗೆ ಬಾರದಿದ್ದರೆ, ತಾಳಿಕಟ್ಟಿಸಿಕೊಳ್ಳುವುದಿಲ್ಲ: ಹಠ ಹಿಡಿದ ಯುವತಿ!

dunia vijay
23/11/2021

ದಾವಣಗೆರೆ: ನಟ ದುನಿಯಾ ವಿಜಯ್ ಅವರು ಬಂದು ಆಶೀರ್ವಾದ ಮಾಡಿದರೆ ಮಾತ್ರವೇ ನಾನು ಮದುವೆಯಾಗುವುದು ಎಂದು ಯುವತಿಯೋರ್ವಳು ಹಠ ಹಿಡಿದು ಕುಳಿತುಕೊಂಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದುನಿಯಾ ವಿಜಯ್ ಅವರ ಅಪ್ಪಟ್ಟ ಅಭಿಮಾನಿಯಾಗಿರುವ ಅನುಷಾ, ನನ್ನ ಮದುವೆಗೆ ವಿಜಯ್ ಅವರು ಬಂದು ಆಶೀರ್ವಾದ ಮಾಡಿದರೆ ಮಾತ್ರವೇ ತಾನು ಮದುವೆಯಾಗುವುದಾಗಿ ಹಠ ಹಿಡಿದಿದ್ದಾಳೆ ಎಂದು ಹೇಳಲಾಗಿದೆ.

ಯುವತಿಯ ಇಡೀ ಕುಟುಂಬವೇ ದುನಿಯಾ ವಿಜಯ್ ಅವರ ದೊಡ್ಡ ಅಭಿಮಾನಿಗಳಾಗಿದೆಯಂತೆ. ಇವರ ತಂದೆ ಶಿವಾನಂದ್ ಅವರು ಹೊಸ ಮನೆ ಕಟ್ಟಿದಾಗ ದುನಿಯಾ ವಿಜಯ್ ಅವರೇ ಈ ಮನೆಯನ್ನು ಓಪನ್ ಮಾಡಬೇಕು ಅಲ್ಲಿಯವರೆಗೆ ಗೃಹಪ್ರವೇಶ ಮಾಡುವುದಿಲ್ಲ ಎಂದು ಹಾಗೆಯೇ ಬಿಟ್ಟಿದ್ದರಂತೆ. ಈ ವಿಚಾರ ತಿಳಿದು ದುನಿಯಾ ವಿಜಯ್ ಅವರು ದಾವಣಗೆರೆಗೆ ಆಗಮಿಸಿದಾಗ ಅಭಿಮಾನಿಯ ಮನೆಯ ಗೃಹ ಪ್ರವೇಶ ಮಾಡಿಸಿದ್ದರು.

ಇದೀಗ ಶಿವಾನಂದ ಅವರ ಮಗಳು ಅನುಷಾಗೆ ಇದೇ 29ಕ್ಕೆ ಮದುವೆ ನಿಶ್ಚಯವಾಗಿದ್ದು, ಇದೇ ಸಂದರ್ಭದಲ್ಲಿ ದುನಿಯಾ ವಿಜಯ್ ಅವರು ನನ್ನ ಮದುವೆಗೆ ಬಾರದೇ ನಾನು ತಾಳಿಯೇ ಕಟ್ಟಿಸಿಕೊಳ್ಳುವುದಿಲ್ಲ ಎಂದು ಹಠ ಹಿಡಿದಿದ್ದಾಳೆ ಎನ್ನಲಾಗಿದೆ.

ಇನ್ನೂ ವಿಜಯ್ ಅವರ ಹೊಸ ಚಿತ್ರದ ಹೆಸರನ್ನು ಕೂಡ ತನ್ನ ಕೈಯಲ್ಲಿ ಹಚ್ಚೆ ಹಾಕಿಸಿಕೊಂಡಿದ್ದಾಳೆ ಎನ್ನಲಾಗಿದೆ. ಲಗ್ನ ಪತ್ರಿಕೆಯಲ್ಲಿ ಕೂಡ ದುನಿಯಾ ವಿಜಯ್ ಅವರ ಫೋಟೋ ಹಾಕಿಸಲಾಗಿದೆ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ತಂದೆ ಕಾರು ಪಾರ್ಕ್ ಮಾಡುತ್ತಿದ್ದ ವೇಳೆ ಮಗನ ಮೇಲೆಯೇ ಹತ್ತಿದ ಕಾರು!

ಗ್ಯಾಸ್ ಸಿಲಿಂಡರ್ ಸ್ಫೋಟ: ಮಹಿಳೆ ಸಹಿತ ಇಬ್ಬರು ಸಾವು: 12 ಮಂದಿಗೆ ಗಾಯ

ದೇವಸ್ಥಾನಕ್ಕೆ 20 ಸಾವಿರ ರೂಪಾಯಿ ದೇಣಿಗೆ ನೀಡಿದ ಭಿಕ್ಷುಕಿ!

ಕಪ್ಪದ ಮಾನಿ ಹಂದ್ರನ ಬೇಟಿ/ ಪೊದು ಸಂಬಂಧ/ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು: ಸಂಚಿಕೆ: 07

ಪತ್ನಿಯನ್ನು ನಾಲೆಯಲ್ಲಿ ಮುಳುಗಿಸಿ ಕೊಂದು ಹೈಡ್ರಾಮಾ ಆಡಿದ ಪತಿ | ಪೊಲೀಸರಿಗೆ ಈತ ಸಿಕ್ಕಿ ಬಿದ್ದದ್ದು ಹೇಗೆ?

ತಾಕತ್ ಇದ್ದರೆ ಪ್ರತಾಪ್ ಸಿಂಹಗೆ ಚಡ್ಡಿ ಬಿಚ್ಚಿಸಿ ಹೊಡೆಯಿರಿ: ಸುಲಫಲ ಮಠದ ಸ್ವಾಮೀಜಿಗೆ ಸಿದ್ದಲಿಂಗ ಸ್ವಾಮೀಜಿ ತಿರುಗೇಟು

 

ಇತ್ತೀಚಿನ ಸುದ್ದಿ

Exit mobile version