4:38 AM Wednesday 15 - October 2025

ರಾಕಿಂಗ್ ಸ್ಟಾರ್ ಯಶ್ ಕ್ಷಮೆ ಕೇಳಿ ದೊಡ್ಡತನ ಮೆರೆದ ಆಮೀರ್ ಖಾನ್ | ಅಷ್ಟಕ್ಕೂ ನಡೆದದ್ದೇನು ಗೊತ್ತಾ?

yash ameerkhan
25/11/2021

ಸಿನಿಡೆಸ್ಕ್: ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಹಾಗೂ ಬಾಲಿವುಡ್ ನಟ ಆಮೀರ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರಲಿದ್ದು, ಈ ಎರಡೂ ಚಿತ್ರಗಳು ಇದೀಗ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಫೈಟಿಂಗ್ ನಡೆಸಲಿದೆ ಎನ್ನುವ ಮಾತುಗಳು ಸಿನಿಮಾರಂಗದಿಂದ ಕೇಳಿ ಬಂದಿದೆ.

ಕೆಜಿಎಫ್- 2 ಚಿತ್ರ ಬಿಡುಗಡೆಗೂ ಮೊದಲೇ ಹಲವು ದಾಖಲೆಗಳನ್ನು ಬರೆದಿದೆ. ಜೊತೆಗೆ ಕೆಜಿಎಫ್  ಮೊದಲ ಚಾಪ್ಟರ್ ಸೃಷ್ಟಿಸಿದ ಹವಾ ಇದೀಗ ಕೆಜಿಎಫ್ 2 ಚಿತ್ರವನ್ನು ನೋಡಲು ಕಾತರದಿಂದ ಕಾಯುವಂತೆ ಮಾಡಿದೆ. ಈ ನಡುವೆ ಕೆಜಿಎಫ್ -2 ಚಿತ್ರ ಹಾಗೂ ‘ಲಾಲ್ ಸಿಂಗ್ ಚಡ್ಡಾ’ ಎರಡೂ ಚಿತ್ರಗಳು ಒಂದೇ ದಿನ ರಿಲೀಸ್ ಆಗುತ್ತಿರುವ ನಡುವೆಯೇ ನಟ ಅಮೀರ್ ಖಾನ್, ರಾಕಿ ಬಾಯ್ ಕ್ಷಮೆ ಕೇಳುವ ಮೂಲಕ ದೊಡ್ಡತನ ಮೆರೆದಿದ್ದಾರೆ.

“ನಾನು ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಡೇಟ್ ಫೈನಲ್ ಮಾಡುವ ಮೊದಲು ಕೆಜಿಎಫ್ ಚಿತ್ರ ತಂಡದ ನಿರ್ಮಾಪಕ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಯಶ್ ಅವರ ಕ್ಷಮೆ ಕೇಳಿದ್ದೆ. ಲಾಕ್ ಡೌನ್ ಮೊದಲಾದ ಸಮಸ್ಯೆಗಳಿಂದ ನಮ್ಮ ಚಿತ್ರ ವಿಳಂಬವಾಗಿರುವುದನ್ನು ನಾನು ವಿವರಿಸಿದ್ದೇನೆ.  ಅವರು ಕೂಡ ಇದನ್ನು ಅರ್ಥ ಮಾಡಿಕೊಂಡು ಸಿನಿಮಾ ರಿಲೀಸ್ ಮಾಡಿ ಎಂದು ಹೇಳಿದ್ದಾರೆ. ಹಾಗಾಗಿ ಅವರು ನಡೆದುಕೊಂಡ ರೀತಿ ನನಗೆ ಬಹಳ ಇಷ್ಟವಾಯಿತು ಎಂದು ಅಮೀರ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಬೆದರಿಕೆ: ಹಿಂದೂ ಜಾಗರಣ ವೇದಿಕೆಯ ಮುಖಂಡನ ವಿರುದ್ಧ ಪ್ರಕರಣ ದಾಖಲು

ರಸ್ತೆಗಳು ಕತ್ರೀನಾ ಕೈಫ್ ಳ ಕೆನ್ನೆಯಂತೆ ನುಣುಪಾಗಿರಬೇಕು ಎಂದ ಸಚಿವ!

ಪೈಪ್ ಕತ್ತರಿಸಿದಾಗ ನೀರಿನ ಬದಲು ಬಂದದ್ದು ಕಂತೆ ಕಂತೆ ಹಣ! | ಎಸಿಬಿ ಅಧಿಕಾರಿಗಳಿಗೇ ಶಾಕ್!

ಗದಗ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮನೆಗೆ ಎಸಿಬಿ ದಾಳಿ: ಕೋಟ್ಯಾಂತರ ಮೌಲ್ಯದ ನಗ—ನಗದು ಪತ್ತೆ

ಮಂಗಳೂರು: ಬಾಲಕಿಯ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳು ಅರೆಸ್ಟ್: ಕೊಲೆಗೂ ಮುನ್ನ ನಡೆದಿತ್ತು ಸಾಮೂಹಿಕ ಅತ್ಯಾಚಾರ

ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ನ್ನು ಕೊಚ್ಚಿ ಕೊಲೆಗೈದ ದರೋಡೆಕೋರರು!

ಇತ್ತೀಚಿನ ಸುದ್ದಿ

Exit mobile version