3:42 AM Sunday 14 - September 2025

ಕಾಡಾನೆ ದಾಳಿಗೆ ದಸರಾ ಆನೆ ಅರ್ಜುನ ಬಲಿ: ಅರ್ಜುನನ  ಹೊಟ್ಟೆಗೆ ತಿವಿದ ಪುಂಡಾನೆ

arjuna
04/12/2023

ಹಾಸನ: ಮೈಸೂರು ದಸರದಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಆನೆ ಅರ್ಜುನ ಕಾಡಾನೆ ದಾಳಿಗೆ ಬಲಿಯಾಗಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಯಸಳೂರು ಬಾಳೆಕೆರೆ ಫಾರೆಸ್ಟ್ ನಲ್ಲಿ ಸೋಮವಾರ ಕಾಡಾನೆ ಸೆರೆ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ವೇಳೆ ಒಂಟಿ ಸಲಗವೊಂದು ಏಕಾಏಕಿ  ಅರ್ಜುನನ ಹೊಟ್ಟೆಗೆ ತಿವಿದಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಅರ್ಜುನ ಸ್ಥಳದಲ್ಲೇ ಸಾವನ್ನಪ್ಪಿದೆ.

ಬಾಳೆಕೆರೆ ಫಾರೆಸ್ಟ್ ನಲ್ಲಿ ಸೋಮವಾರ ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಅರಿವಳಿಕೆ ಚುಚ್ಚುಮದ್ದು ನೀಡುವ ಸಂದರ್ಭದಲ್ಲಿ ಪುಂಡಾನೆ ದಾಳಿ ನಡೆಸಿದೆ. ನಾಲ್ಕು ಸಾಕಾನೆಗಳೊಂದಿಗೆ ಆ ಆನೆಯನ್ನು ಹಿಮ್ಮೆಟ್ಟಿಸಲು ಮಾವುತರು ಪ್ರಯತ್ನಿಸಿದ್ದಾರೆ.  ಆದ್ರೆ ಮೂರು ಆನೆಗಳು ಹಿಂದೆ ಸರಿದಾಗ ಸಾಕಾನೆ ಅರ್ಜುನನ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಹೊಟ್ಟಗೆ ತಿವಿದ ಪರಿಣಾಮ ಅರ್ಜುನ ಮೃತಪಟ್ಟಿದೆ.

ಅರ್ಜುನ ಆನೆ 2012ರಿಂದ 2019ರವರೆಗೆ ಮೈಸೂರು ದಸರಾ ಉತ್ಸವದಲ್ಲಿ 8 ಬಾರಿ   ಅಂಬಾರಿ ಹೊತ್ತಿತ್ತು. ಇನ್ನು ಅರ್ಜುನ ಕೇವಲ ನೆನಪು ಮಾತ್ರ.

ಇತ್ತೀಚಿನ ಸುದ್ದಿ

Exit mobile version