ಅವಘಡ: ಚಾರ್ಜಿಂಗ್ ವೇಳೆ ಚಾರ್ಜ್ ಬ್ಯಾಟರಿ ಸ್ಫೋಟ; ಸ್ಕೂಟರ್ ಸುಟ್ಟು ಭಸ್ಮ

ಗುಜರಾತ್ ನ ಬನಸ್ಕಾಂತ ಜಿಲ್ಲೆಯ ಮನೆಯೊಂದರಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಚಾರ್ಜ್ ಮಾಡುವಾಗ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಜಿಲ್ಲೆಯ ನಿವಾಸಿ ಮಹೇಶ್ ಭಾಯ್ 15 ತಿಂಗಳ ಹಿಂದೆಯಷ್ಟೇ 80,000 ರೂ.ಗೆ ಇ-ಬೈಕ್ ಖರೀದಿಸಿದ್ದರು.
ಮಹೇಶ್ ಅವರ ಮಗಳು ಬೈಕಿನ ಬ್ಯಾಟರಿಯನ್ನು ತೆಗೆದು ತಮ್ಮ ಮನೆಯ ಗ್ಯಾಲರಿಯಲ್ಲಿ ಚಾರ್ಜಿಂಗ್ ಮಾಡಲು ವ್ಯವಸ್ಥೆ ಮಾಡಿದ್ದರು. ಕೇವಲ ಐದು ನಿಮಿಷಗಳ ನಂತರ ಇ-ಬೈಕ್ ಬ್ಯಾಟರಿ ಸ್ಫೋಟಗೊಂಡು ಬೆಂಕಿಯ ಜ್ವಾಲೆ ಆವರಿಸಿತು.
ಸ್ಫೋಟದ ಶಬ್ದ ಕೇಳಿದ ಸ್ಥಳೀಯರು ತಕ್ಷಣ ಮಹೇಶ್ ಅವರ ಮನೆಗೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಮಹೇಶ್ ಭಾಯ್ ಈ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಬ್ಯಾಟರಿ ಸ್ಫೋಟಗೊಂಡಾಗ ತನ್ನ ಮಗಳು ಬೈಕ್ ಸವಾರಿ ಮಾಡುತ್ತಿರಲಿಲ್ಲ ಎಂದು ನಿಟ್ಟುಸಿರು ಬಿಟ್ಟರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth