12:27 AM Tuesday 28 - October 2025

ದೆಹಲಿ ಮದ್ಯ ಪ್ರಕರಣ: ಕೆಸಿಆರ್ ಪುತ್ರಿ ಕವಿತಾರನ್ನು ಬಂಧಿಸಿದ ಇಡಿ

15/03/2024

ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್) ಎಂಎಲ್ಸಿ ಕೆ ಕವಿತಾ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಹೈದರಾಬಾದ್‌ನಲ್ಲಿ ಬಂಧಿಸಿದೆ. ಇದಕ್ಕೂ ಮುನ್ನ ಇಂದು ಹೈದರಾಬಾದ್‌ನಲ್ಲಿರುವ ಕೆ ಕವಿತಾ ಅವರ ನಿವಾಸದಲ್ಲಿ ಇಡಿ ಶೋಧ ನಡೆಸಿತು. ಅಧಿಕಾರಿಗಳು ಆಕೆಯನ್ನು ವಿಚಾರಣೆಗಾಗಿ ದೆಹಲಿಗೆ ಕರೆದುಕೊಂಡು ಹೋದರು.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ಶಂಕಿತ ಪ್ರಕರಣದ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ. ತೆಲಂಗಾಣದ ಮಾಜಿ ಮುಖ್ಯಮಂತ್ರಿ ಮತ್ತು ಬಿಆರ್ ಎಸ್ ನಾಯಕ ಕೆ.ಚಂದ್ರಶೇಖರ್ ರಾವ್ ಅವರ 45 ವರ್ಷದ ಪುತ್ರಿ ಕೆ.ಕವಿತಾ ಅವರನ್ನು ವಿಚಾರಣೆಗೆ ಕರೆದ ಸುಮಾರು ಎರಡು ತಿಂಗಳ ನಂತರ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.

ಹೈದರಾಬಾದ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಭಾರತ ರಾಷ್ಟ್ರ ಸಮಿತಿ (ಬಿಆರ್ ಎಸ್) ಮುಖಂಡ ಮತ್ತು ತೆಲಂಗಾಣದ ಮಾಜಿ ಸಚಿವ ವೇಮುಲಾ ಪ್ರಶಾಂತ್ ರೆಡ್ಡಿ ಕವಿತಾ, ಕವಿತಾ ರಾತ್ರಿ 8: 45 ರ ವಿಮಾನದಲ್ಲಿ ದೆಹಲಿಗೆ ಹೊರಡಬೇಕಿತ್ತು ಎಂದು ಉಲ್ಲೇಖಿಸಿದ್ದಾರೆ. ಈ ದಾಳಿಯು ಪೂರ್ವಯೋಜಿತವಾಗಿದೆ ಎಂದು ಅವರು ಪ್ರತಿಪಾದಿಸಿದ್ದು ಇದನ್ನು ಪ್ರತಿಭಟಿಸುವ ಉದ್ದೇಶವನ್ನು ಘೋಷಿಸಿದರು.

ಬಿಆರ್ ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್, ಮಾಜಿ ಸಚಿವ ಹರೀಶ್ ರಾವ್ ಮತ್ತು ಪಕ್ಷದ ಬೆಂಬಲಿಗರು ಕವಿತಾ ಅವರ ನಿವಾಸದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಈಗ ನಿಷ್ಕ್ರಿಯವಾಗಿರುವ 2021-22ರ ದೆಹಲಿ ಅಬಕಾರಿ ನೀತಿಯ ಅಡಿಯಲ್ಲಿ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವ “ಸೌತ್ ಗ್ರೂಪ್” ಎಂದು ಕರೆಯಲ್ಪಡುವ ಮದ್ಯ ವ್ಯಾಪಾರಿಗಳ ಲಾಬಿಯೊಂದಿಗೆ ಕವಿತಾ ಸಂಬಂಧ ಹೊಂದಿದ್ದಾರೆ ಎಂದು ಇಡಿ ಆರೋಪಿಸಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version