6:20 AM Thursday 29 - January 2026

ಕಾರು ಚಾಲಕ ಮಾಡಿದ ಸಣ್ಣ ಯಡವಟ್ಟಿನಿಂದ ಇಡೀ ಕುಟುಂಬದ ದುರಂತ ಅಂತ್ಯ!

11/02/2021

ಜೈಪುರ: ಕಾರು ಚಾಲಕನ ನಿರ್ಲಕ್ಷ್ಯದಿಂದಾಗಿ ಒಂದೇ ಕುಟುಂಬದ ಮೂವರು ಸೇರಿದಂತೆ ಒಟ್ಟು ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ  ಇಂದಿರಾಗಾಂಧಿ ಕಾಲುವೆ ಸಮೀಪದಲ್ಲಿ ನಡೆದಿದೆ.

ಹನುಮನ್ ಗರ್ ಜಿಲ್ಲೆಯಲ್ಲಿ ಸಿಕಾರ್ ನಿಂದ ರಾವತ್ಸರ್ ಗೆ ದಂಪತಿ ಹಾಗೂ ಅವರ ಮಗಳು ಹಾಗೂ ಸಂಬಂಧಿಕರು ಕಾರಿನಲ್ಲಿ ತೆರಳುತ್ತಿದ್ದು,  ಈ ಸಂದರ್ಭ ಇಲ್ಲಿನ ಇಂದಿರಾಗಾಂಧಿ ಕಾಲುವೆ ಸಮೀಪ ಚಾಲಕ ರಮೇಶ್ ಕುಮಾರ್ ಕಾರು ನಿಲ್ಲಿಸಿ ಹ್ಯಾಂಡ್ ಬ್ರೇಕ್ ಹಾಕದದೇ ಮೂತ್ರ ವಿಸರ್ಜನೆಗೆ ತೆರಳಿದ್ದು, ಈ ವೇಳೆ ಕಾರು ಇಳಿಜಾರು ಪ್ರದೇಶದಲ್ಲಿ ಚಲಿಸಿ ಕಾಲುವೆಗೆ ಉರುಳಿ ಬಿದ್ದಿದೆ.

ಕಾರಿನೊಳಗಿದ್ದ ವಿನೋದ್ ಕುಮಾರ್(45), ಪತ್ನಿ ರೇಣು(42) ಹಾಗೂ 15 ವರ್ಷದ ಪುತ್ರಿ ಹಾಗೂ ಅವರ ಸಂಬಂಧಿಕರಾದ ಸುನೀತ ಭತಿ(40) ಮೃತಪಟ್ಟವರಾಗಿದ್ದಾರೆ. ಕಾಲುವೆಗೆ ಬಿದ್ದ ಇವರ ಮೃತದೇಹವನ್ನು ಸ್ಥಳೀಯ ಮೀನುಗಾರರ ಸಹಾಯದಿಂದ ಪೊಲೀಸರು ಮೇಲಕ್ಕೆತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version