ಮರಳು ಸಾಗಿಸುತ್ತಿದ್ದ ಟ್ರಕ್ ಪಲ್ಟಿ: ಒಂದೇ ಕುಟುಂಬದ 8 ಮಂದಿ ಸಾವು

ಉತ್ತರ ಪ್ರದೇಶದ ಹರ್ದೋಯ್ ನಲ್ಲಿ ಮರಳು ಸಾಗಿಸುತ್ತಿದ್ದ ಟ್ರಕ್ ಪಲ್ಟಿಯಾದ ಪರಿಣಾಮ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ರಕ್ ಪಲ್ಟಿಯಾದ ನಂತರ ಚೆಲ್ಲಿದ ಮರಳಿನ ಅಡಿಯಲ್ಲಿ ರಸ್ತೆ ಬದಿಯಲ್ಲಿ ವಾಸಿಸುತ್ತಿದ್ದ ಇಡೀ ಕುಟುಂಬ ಹೂತುಹೋಗಿದೆ. ಬಿಳಿ ಮರಳನ್ನು ಸಾಗಿಸುತ್ತಿದ್ದ ಟ್ರಕ್ ರಸ್ತೆ ಬದಿಯ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಕುಟುಂಬದ ಮೇಲೆ ಪಲ್ಟಿಯಾಗಿದ್ದು, ಇಡೀ ಕುಟುಂಬವು ಅದರ ಅಡಿಯಲ್ಲಿ ಹೂತುಹೋಗಿದೆ. ಮರಳು ಮತ್ತು ಟ್ರಕ್ ಅನ್ನು ತೆಗೆದು, ಅದರ ಅಡಿಯಲ್ಲಿ ಹೂತುಹೋದ ಜನರನ್ನು ಹೊರತೆಗೆಯುವ ಹೊತ್ತಿಗೆ, ನಾಲ್ಕು ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದರು.
ಗಂಗಾ ದಡದಿಂದ ಮರಳು ಗಣಿಗಾರಿಕೆ ನಡೆಸಿದ ನಂತರ ಟ್ರಕ್ ಹರ್ದೋಯ್ ಗೆ ತೆರಳುತ್ತಿತ್ತು. ಹೆಚ್ಚುವರಿ ಮರಳಿನಿಂದಾಗಿ, ತಿರುವಿನಲ್ಲಿ ಅದು ಪಲ್ಟಿಯಾಗಿದೆ. ಇದರಿಂದಾಗಿ ಈ ಅಪಘಾತ ಸಂಭವಿಸಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಪೊಲೀಸರು ಸ್ಥಳಕ್ಕೆ ತಲುಪಿ ಟ್ರಕ್ ಅಡಿಯಲ್ಲಿ ಹೂತುಹೋದ ಜನರನ್ನು ಹೇಗೋ ಹೊರತೆಗೆದರು, ಆದರೆ ಹುಡುಗಿಯನ್ನು ಹೊರತುಪಡಿಸಿ ಎಲ್ಲರೂ ಸಾವನ್ನಪ್ಪಿದ್ದಾರೆ” ಎಂದು ಎಂಪಿ ಸಿಂಗ್, ಡಿಎಂ ಹರ್ದೋಯ್ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth