4:36 AM Wednesday 22 - October 2025

ವಿದ್ಯುತ್ ಬಿಲ್ ಹೆಚ್ಚು ಬಂದಿದ್ಯಾ?: ಯಾಕೆ?—ಇಲ್ಲಿದೆ ವಿವರ

electrician
11/06/2023

ಬೆಂಗಳೂರು : ರಾಜ್ಯದಲ್ಲಿ ಈ ತಿಂಗಳ ವಿದ್ಯುತ್​ ಬಿಲ್​ ಪ್ರತಿಯೊಬ್ಬರಿಗೂ ಜಾಸ್ತಿ ಬಂದಿದ್ದು ಫ್ರೀ ಕರೆಂಟ್​ ಕನಸು ಕಾಣ್ತಿದ್ದ ರಾಜ್ಯದ ಜನತೆಗೆ ಆಘಾತ ತಂದಿದೆ. ಕರೆಂಟ್​ ಬಿಲ್​ ನೋಡಿದ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕಲು ಆರಂಭಿಸಿದ್ದರು. ಈ ಎಲ್ಲದರ ನಡುವೆ ಇದೀಗ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಂಶ ಬೀಳಗಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ವಿದ್ಯುತ್​ ದರ ಏರಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಮೇ 12ರಂದು ಪ್ರತಿ ಯುನಿಟ್​ಗೆ 70 ಪೈಸೆ ಏರಿಕೆಯಾಗಿತ್ತು. ಹೀಗಾಗಿ ಜೂನ್​ ತಿಂಗಳಲ್ಲಿ ನೀಡಲಾಗುವ ಮೇ ತಿಂಗಳ ಬಿಲ್​ನಲ್ಲಿ ಏಪ್ರಿಲ್​ ತಿಂಗಳ ಬಿಲ್​ ನ್ನು ಬಾಕಿ ಮೊತ್ತ ಎಂದು ನೀಡಿದ್ದೇವೆ. 2 ಶ್ರೇಣಿಗಳಲ್ಲಿ ವಿದ್ಯುತ್​ ಶುಲ್ಕ ಸಂಗ್ರಹ ನಡೆಯಲಿದೆ ಎಂದು ಹೇಳಿದ್ದಾರೆ.

ಮೊದಲ 100 ಯೂನಿಟ್‌​​ಗೆ ಪ್ರತಿ ಯೂನಿಟ್‌ ದರ 4.75 ರೂ. ವಿಧಿಸಲಾಗಿದೆ. 100 ಯೂನಿಟ್ ಮೀರಿದರೆ 2ನೇ ಶ್ರೇಣಿ ದರ ಪ್ರತಿ ಯೂನಿಟ್​​ಗೆ 7 ರೂ. ಅನ್ವಯವಾಗಲಿದೆ. ಈ ಮೊದಲು ಮೂರು ಶ್ರೇಣಿ ದರಗಳಲ್ಲಿ ಶುಲ್ಕ ಸಂಗ್ರಹಿಸಲಾಗುತ್ತಿತ್ತು. ಮೊದಲ 50 ಯೂನಿಟ್​​​ಗೆ 4.15 ರೂ., ನಂತರದ 50 ಯೂನಿಟ್​​​ಗೆ 5.6 ರೂ. 100 ಯೂನಿಟ್ ಮೀರಿದರೆ 7.15 ರೂ. ಸಂಗ್ರಹಿಸಲಾಗುತ್ತಿತ್ತು.

ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ ತಿಂಗಳ ವಿದ್ಯುತ್​ ದರ ಏರಿಕೆ ಘೋಷಣೆಗೆ ಬಿಜೆಪಿ ಸರ್ಕಾರ ತಡೆ ನೀಡಿತ್ತು. ಆದರೆ ಇದೀಗ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರ್ತಾ ಇದ್ದಂತೆ ದರ ಏರಿದೆ.ಈ‌ ನಡುವೆ ಸರ್ಕಾರ 200ಯುನಿಟ್ ಬಳಕೆ‌ ಮೀರದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಸಿ ಅದರೊಳಗಿನ ಬಿಲ್‌ ಉಚಿತ ಎಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version