ಆನೆ ದಾಳಿ ಪ್ರಕರಣ: ದಟ್ಟ ಕಾನನದ ನಡುವಿನಿಂದ ಯುವಕನ ಮೃತದೇಹ ತಂದ ಅಧಿಕಾರಿಗಳು

chikkamagaluru news
22/11/2023

ಚಿಕ್ಕಮಗಳೂರು : ಮೂಡಿಗೆರೆಯಲ್ಲಿ ಆನೆ ದಾಳಿಗೆ ಯುವಕ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಡಿನ ನಡುವಿನ ಬೈರಾಪುರದಿಂದ ಮೃತದೇಹ ತರೋದಕ್ಕೂ ಕಷ್ಟಸಾಧ್ಯವಾಗಿದ್ದು, ಸವಾಲಾಗಿ ಪರಿಣಮಿಸಿತ್ತು.

ಬೈರಾಪುರ ಗ್ರಾಮ ವಾರ್ಷಿಕ ದಾಖಲೆ ಮಳೆ ಬೀಳೋ ದಟ್ಟ ಕಾನನ ಇದಾಗಿದ್ದು, ರಾತ್ರಿ ವೇಳೆ ತೆರಳಿದರೆ, ಮತ್ತೆ ಆನೆ ದಾಳಿ ನಡೆಸುವ ಭಯದಲ್ಲಿ ಅರಣ್ಯ ಅಧಿಕಾರಿಗಳಿದ್ದರು.  ರಸ್ತೆಯುದ್ದಕ್ಕೂ ಪಟಾಕಿ ಸಿಡಿಸಿಕೊಂಡು ತೆರಳಿದ ಅರಣ್ಯಾಧಿಕಾರಿಗಳು ಕೊನೆಗೂ ಮೃತದೇಹವನ್ನು ತಂದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪೊಲೀಸರು ಸಾಥ್‌ ನೀಡಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಆನೆ ನಿಗ್ರಹ ಪಡೆಯ ಸದಸ್ಯರಾಗಿದ್ದ ಕಾರ್ತಿಕ್ ಗೌಡ (26)  ಎಂಬವರು ಬಲಿಯಾಗಿದ್ದರು. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ 20 ದಿನಗಳಲ್ಲಿ ಕಾಡಾನೆ ದಾಳಿಗೆ 2ನೇ ಬಲಿಯಾಗಿದೆ.

chikkamagaluru

ಕಾರ್ತಿಕ್ ಗೌಡ (26)


ಮೃತ ಕಾರ್ತಿಕ್ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ನಿವಾಸಿಯಾಗಿದ್ದಾರೆ. ಸರ್ಕಾರ ರಚಿಸಿದ್ದ. ಆನೆ ನಿಗ್ರಹ ಪಡೆಯಲ್ಲಿ ಕೆಲಸ ಕೆಲಸ ಮಾಡುತ್ತಿದ್ದರು. ಬೈರಾಪುರದಲ್ಲಿ ಆನೆ ಓಡಿಸುವಾಗ ತಿರುಗಿಬಿದ್ದ ಆನೆ ದಾಳಿ ನಡೆಸಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಅವರು ಸಾವನ್ನಪ್ಪಿದ್ದಾರೆ.

ಕಳೆದ 20 ದಿನಗಳ ಹಿಂದೆ ಆಲ್ದೂರಿನಲ್ಲಿ ಅಮಾಯಕ ಮಹಿಳೆ ವೀಣಾ ಅವರು ಕಾಡಾನೆ ತುಳಿತಕ್ಕೆ ಬಲಿಯಾಗಿದ್ದರು. ಇಂದು ಮೂಡಿಗೆರೆಯ ಬೈರಾಪುರದಲ್ಲಿ ಕಾರ್ತಿಕ್ ಸಾವನ್ನಪ್ಪಿದ್ದಾರೆ.  ಒಂದೂವರೆ ತಿಂಗಳ ಹಿಂದೆ ಆಲ್ದೂರು ಸಮೀಪ ಚಿನ್ನಿ ಎಂಬುವರು  ಕಾಡಾನೆಗೆ ಬಲಿಯಾಗಿದ್ದಾರೆ.

ಇತ್ತೀಚಿನ ಸುದ್ದಿ

Exit mobile version