1:41 PM Tuesday 18 - November 2025

ಉತ್ಸವದ ವೇಳೆ ಏಕಾಏಕಿ ಕಾದಾಡಿದ ಆನೆಗಳು: ಜನರು ಚೆಲ್ಲಾಪಿಲ್ಲಿ: ವಿಡಿಯೋ ವೈರಲ್

theruvanadapuram
23/03/2024

ತಿರುವನಂತಪುರಂ: ಕೇರಳದ ದೇವಸ್ಥಾನಗಳ ಉತ್ಸವಗಳಲ್ಲಿ ಆನೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಆನೆಯ ಮೇಲೆ ಕುಳಿತು ಮೆರವಣಿಗೆ ಮಾಡುವುದು ಸರ್ವೇ ಸಾಮಾನ್ಯವಾಗಿದೆ. ಆದ್ರೆ ಇತ್ತೀಚೆಗೆ, ಆನೆಗಳು ತಿರುಗಿಬೀಳುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ.

ಮಾರ್ಷ್ 22ರಂದು ಈ ಘಟನೆ ನಡೆದಿದ್ದು, ಕೇರಳದ ತ್ರಿಶ್ಯೂರ್ ಅರಟ್ಟುಪುಳದಲ್ಲಿ ಉಪಚಾರಮ್ ಚೋಲ್ಲಾಲ್ ದೇವರ ಉತ್ಸವ ನಡೆಯುತ್ತಿದ್ದ ವೇಳೆ ಉತ್ಸವ ಮೂರ್ತಿ ಹೊತ್ತಿದ್ದ ಆನೆ ಮತ್ತೊಂದು ಆನೆಯ ವಿರುದ್ಧ ತಿರುಗಿ ಬಿದ್ದಿದೆ.

ಏಕಾಏಕಿ ಎರಡು ಆನೆಗಳ ನಡುವೆ ಬಿಗ್ ಫೈಟ್ ಆರಂಭವಾಗಿದೆ. ಮೆರವಣಿಗೆಯಲ್ಲಿ ಕಿಕ್ಕಿರಿದು ಜನರು ನೆರೆದಿದ್ದು, ಆನೆಗಳ ಗುದ್ದಾಟಕ್ಕೆ ದಿಕ್ಕಾಪಾಲಾಗಿ ಓಡಿದ್ದಾರೆ. ರೊಚ್ಚಿಗೆದ್ದ ಆನೆ ಮತ್ತೊಂದು ಆನೆಯನ್ನು ಗುದ್ದಾಡಿ ಓಡಿಸಲು ಆರಂಭಿಸಿದೆ. ಆನೆಗಳ ಘರ್ಷಣೆಯಿಂದ ಜನ ದಿಕ್ಕಾಪಾಲಾಗಿ ಓಡಿದರು.

ಸಾಕಷ್ಟು ಜನರ ಮಧ್ಯೆ ಉತ್ಸವದಲ್ಲಿ ಭಾಗಿಯಾಗಿದ್ದ ಆ ಆನೆ ಗಾಬರಿಗೊಂಡಿತ್ತು. ಹೀಗಾಗಿ ಏಕಾಏಕಿ ಅದು ತಿರುಗಿಬಿದ್ದಿದೆ ಎನ್ನಲಾಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿ ಸಂಭವಿಸಿಲ್ಲ. ಆನೆಯ ಮಾವುತ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ.

ಈ ಆನೆಗಳು ಪರಸ್ಪರ ಕಾದಾಡುತ್ತಾ, ಘಟನೆ ನಡೆದ ಸ್ಥಳದಿಂದ ಒಂದು ಕಿಲೋ ಮೀಟರ್ ದೂರದವರೆಗೆ ತೆರಳಿತ್ತು. ಕೊನೆಗೆ ಆನೆಗಳನ್ನು ಸಾಕಷ್ಟು ಕಷ್ಟಪಟ್ಟು ನಿಯಂತ್ರಿಸಲಾಗಿದೆ.

 

ಇತ್ತೀಚಿನ ಸುದ್ದಿ

Exit mobile version