ಯುದ್ಧ ಪೀಡಿತ ಗಾಝಾ, ಇಸ್ರೇಲಿ ಆಸ್ಪತ್ರೆಗಳಿಗೆ ಜಾಹೀರಾತು ಆದಾಯವನ್ನು ದಾನ ಮಾಡಲು ಎಲೋನ್ ಮಸ್ಕ್ ನಿರ್ಧಾರ

22/11/2023

ಎಲೋನ್ ಮಸ್ಕ್ ಅವರು ತಮ್ಮ ಸಾಮಾಜಿಕ ಮಾಧ್ಯಮ ಸೈಟ್ ಎಕ್ಸ್ ತನ್ನ ಜಾಹೀರಾತು ಆದಾಯವನ್ನು ಯುದ್ಧ ಪೀಡಿತ ಗಾಝಾ ಮತ್ತು ಇಸ್ರೇಲ್ ನ ಆಸ್ಪತ್ರೆಗಳಿಗೆ ದಾನ ಮಾಡುವುದಾಗಿ ಘೋಷಿಸಿದ್ದಾರೆ.

“ಗಾಝಾ ಯುದ್ಧಕ್ಕೆ ಸಂಬಂಧಿಸಿದ ಜಾಹೀರಾತು ಮತ್ತು ಚಂದಾದಾರಿಕೆಗಳಿಂದ ಬರುವ ಎಲ್ಲಾ ಆದಾಯವನ್ನು ಎಕ್ಸ್ ಕಾರ್ಪ್ ಗಾಝಾ ಹಾಗೂ ಇಸ್ರೇಲ್‌ನ ಆಸ್ಪತ್ರೆಗಳಿಗೆ
ರೆಡ್ ಕ್ರಾಸ್ / ಕ್ರೆಸೆಂಟ್ ಗೆ ದಾನ ಮಾಡಲಿದೆ” ಎಂದು ಮಸ್ಕ್ ಎಕ್ಸ್ ನಲ್ಲಿ ಬರೆದಿದ್ದಾರೆ.

ಇಸ್ರೇಲ್ ರಕ್ಷಣಾ ಪಡೆ ಮತ್ತು ಗಾಝಾವನ್ನು ಆಳುತ್ತಿರುವ ಹಮಾಸ್ ನಡುವಿನ ತೀವ್ರ ಹೋರಾಟದ ಮಧ್ಯೆ ಈ ಪ್ರಕಟಣೆ ಬಂದಿದೆ. ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಈವರೆಗೆ 13,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಗಾಝಾದ ಅತಿದೊಡ್ಡ ಅಲ್ ಶಿಫಾ ಸೇರಿದಂತೆ ಆಸ್ಪತ್ರೆಗಳು ಸಂಘರ್ಷ ಮತ್ತು ನಿರ್ಣಾಯಕ ಪೂರೈಕೆಗಳ ಕೊರತೆಯಿಂದಾಗಿ ವಾಸ್ತವವಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಕಳೆದ ತಿಂಗಳು, ಎಲೋನ್ ಮಸ್ಕ್ ಅವರು ಗಾಝಾದಲ್ಲಿನ ಮಾನ್ಯತೆ ಪಡೆದ ಸಹಾಯ ಸಂಸ್ಥೆಗಳಿಗೆ ಸ್ಟಾರ್ ಲಿಂಕ್ ಸಂಪರ್ಕವನ್ನು ಒದಗಿಸುತ್ತದೆ ಎಂದು ಘೋಷಿಸಿದ್ದರು. ಈ ಪ್ರದೇಶದಲ್ಲಿ ಸಂವಹನ ಮತ್ತು ಇಂಟರ್ ನೆಟ್ ಕಡಿತಗೊಂಡ ನಂತರ ಹೆಣಗಾಡುತ್ತಿದೆ.

ಸ್ಟಾರ್ ಲಿಂಕ್ ಎಂಬುದು ಮಸ್ಕ್ ಅವರ ಬಾಹ್ಯಾಕಾಶ ಹಾರಾಟ ಕಂಪನಿ ಸ್ಪೇಸ್ಎಕ್ಸ್ ಅಭಿವೃದ್ಧಿಪಡಿಸಿದ ಉಪಗ್ರಹ ನೆಟ್ ವರ್ಕ್ ಆಗಿದ್ದು, ದೂರದ ಸ್ಥಳಗಳಿಗೆ ಕಡಿಮೆ ವೆಚ್ಚದ ಇಂಟರ್ ನೆಟ್ ಒದಗಿಸುತ್ತದೆ. ಸ್ಟಾರ್ ಲಿಂಕ್ ಉಪಗ್ರಹವು ಸರಿಸುಮಾರು ಐದು ವರ್ಷಗಳ ಜೀವಿತಾವಧಿಯನ್ನು ಹೊಂದಿದೆ ಮತ್ತು ಸ್ಪೇಸ್ಎಕ್ಸ್ ಅಂತಿಮವಾಗಿ ಈ ಮೆಗಾಕಾನ್ಸ್ಟೆಲೇಶನ್ ಎಂದು ಕರೆಯಲ್ಪಡುವ 42,000 ಉಪಗ್ರಹಗಳನ್ನು ಹೊಂದುವ ಭರವಸೆ ಹೊಂದಿದೆ.

ಇತ್ತೀಚಿನ ಸುದ್ದಿ

Exit mobile version