12:31 AM Wednesday 20 - August 2025

ಇನ್ನು ಮುಂದೆ ಇಡ್ಲಿ ವಡೆಯೂ ಕಾಸ್ಟ್ಲೀ…. ! | ತಿನ್ನಂಗಿಲ್ಲ, ಉಗಿಯಂಗಿಲ್ಲ!

idli vada
08/11/2021

ಒಂದೆಡೆ ಕೇಂದ್ರ ಸರ್ಕಾರ ದೀಪಾವಳಿ ಉಡುಗೊರೆಯಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ. ಇನ್ನೊಂದೆಡೆ ಜನ ಸಾಮಾನ್ಯರ ದಿನನಿತ್ಯದ ಆವಶ್ಯಕತೆಗಳಾದ  ತರಕಾರಿ, ದಿನ ಬಳಕೆ ವಸ್ತುಗಳಿಗೆ ಬೆಲೆ ಏರಿಕೆಯಾಗಿದೆ. ಈ ನಡುವೆ ಜನ ಸಾಮಾನ್ಯರಿಗೆ ಇನ್ನೊಂದು ಶಾಕಿಂಗ್ ನ್ಯೂಸ್  ದೊರೆತಿದೆ.

ಹೌದು…! ತರಕಾರಿ ಬೆಲೆ ಹೆಚ್ಚಾದ್ರೆ, ನಮ್ಗೇನು ನಾವು ಹೊಟೇಲ್ ನಲ್ಲಿ ಊಟ ಮಾಡ್ತೀವಿ ಅಂತ ಅಂದುಕೊಳ್ಳುವವರು ಕೂಡ ಇರಬಹುದು ಆದರೆ, ಇನ್ನು ಮುಂದೆ ಹೊಟೇಲ್ ನಲ್ಲಿ ಇಡ್ಲಿ,  ವಡೆ, ದೋಸೆ, ಚಹಾ, ಕಾಫಿ  ಮೊದಲಾದವುಗಳ ಬೆಲೆ ಕೂಡ ಏರಿಕೆಯಾಗಲಿದೆ.

ಮಾಹಿತಿಯ ಪ್ರಕಾರ ನವೆಂಬರ್ 8(ಇಂದು)ರಿಂದ ಹೊಟೇಲ್ ಗಳಲ್ಲಿ ಹೊಸ ದರವನ್ನು ಜಾರಿ ಮಾಡಲಾಗುತ್ತಿದೆ. ಕೆಲವು ಹೊಟೇಲ್ ಗಳು ನವೆಂಬರ್ 15ರಿಂದ ಭರ್ಜರಿಯಾಗಿ ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಕೂಡ ಹೇಳಲಾಗಿದೆ.

ಎಲ್ಲ ತಿಂಡಿ ತಿನಿಸುಗಳ ಮೇಲೆ ಶೇ.10ರಿಂದ ಶೇ.20ರವರೆಗೆ ದರ ಏರಿಕೆಗೆ ರಾಜ್ಯ ಹೊಟೇಲ್ ಮಾಲಿಕರ ಸಂಘ ನಿರ್ಧರಿಸಿದೆ.  ಈ ಬೆಲೆಯು ರಾಜ್ಯದ ಎಲ್ಲ ಹೊಟೇಲ್ ಗಳಿಗೂ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version