4:49 AM Thursday 23 - October 2025

ಎಂಥಾ ಮಕ್ಕಳಿಗೆ ಜನ್ಮ ಕೊಟ್ಟೆ ತಾಯಿ: 7 ಮಕ್ಕಳಿದ್ದರೂ ತಾಯಿ ಸತ್ತಾಗ ಒಬ್ಬರೂ ಬರಲಿಲ್ಲ!

lakshmi hegde
08/01/2024

ದಕ್ಷಿಣ ಕನ್ನಡ:  ಮಕ್ಕಳಿಗೆ ಬೇಡವಾಗಿ ಅನಾಥಾಶ್ರಮಕ್ಕೆ ಸೇರಿದ್ದ ವೃದ್ಧೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದು, 7 ಮಕ್ಕಳಿದ್ದರೂ ಒಬ್ಬರೇ ಒಬ್ಬರು ತಾಯಿಯನ್ನು ನೋಡಲು ಆಗಮಿಸಿಲ್ಲ…! ಇಂತಹದ್ದೊಂದು ಘಟನೆ ನಡೆದಿರೋದು, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ.

ಲಕ್ಷ್ಮೀ ಹೆಗ್ಡೆ(90) ಮೃತಪಟ್ಟ ವೃದ್ಧೆಯಾಗಿದ್ದಾರೆ. ಇವರು ಉಪ್ಪಿನಂಗಡಿ ಬಳಿಯ ಇಳಂತಿಲದಲ್ಲಿ ಸ್ವಂತ ಮನೆ ಹೊಂದಿದ್ದರು.  ಇಳಿವಯಸ್ಸಿನಲ್ಲಿ ಮಕ್ಕಳಿಗೆ ಬೇಡವಾಗಿದ್ದ ಲಕ್ಷ್ಮೀ ಇವರು, ತನಗೆ ನ್ಯಾಯ ಕೊಡಿಸಿ ಅಂತ ಪೊಲೀಸರ ಮೊರೆ ಹೋಗಿದ್ದರು. ಆದ್ರೆ ಈ ಬಗ್ಗೆ ಮಕ್ಕಳು ಯಾವುದೇ ಪ್ರತಿಕ್ರಿಯೆ ನೀಡದೇ ತಾಯಿಯನ್ನು ದೂರು ತಳ್ಳಿದ್ದರು.

ಆಗಿನ ಠಾಣಾಧಿಕಾರಿ ನಂದ ಕುಮಾರ್ ಲಕ್ಷ್ಮೀ ಹೆಗ್ಡೆ ಅವರನ್ನು ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಸೇರಿಸಿದ್ದರು. ಅಲ್ಲದೇ ಆಗಾಗ ಅವರ ಆರೋಗ್ಯ ವಿಚಾರಿಸುತ್ತಿದ್ದರು. ಆದ್ರೆ ಇದೀಗ ಲಕ್ಷ್ಮೀ ಅವರು ಮೃತಪಟ್ಟಿದ್ದಾರೆ. ಈ ಸುದ್ದಿಯನ್ನು ಮಕ್ಕಳಿಗೆ ತಿಳಿಸಿದರೂ 7 ಮಕ್ಕಳಿದ್ದರೂ ಒಬ್ಬರೂ ಈ ಕಡೆಗೆ ತಲೆ ಹಾಕಿಯೂ ನೋಡಿಲ್ಲ. ಸದ್ಯ ಅನಾಥಾಶ್ರಮದವರೇ ಲಕ್ಷ್ಮೀ ಅವರ ಅಂತಿಮ ಸಂಸ್ಕಾರ ನೆರವೇರಿಸಿದ್ದಾರೆ.

ಇದನ್ನೂ ಓದಿ:

ಪ್ರೊಫೆಸರ್ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ: ಸಿಎಂಗೆ ಪತ್ರ ಬರೆದ 500ಕ್ಕೂ ಅಧಿಕ ವಿದ್ಯಾರ್ಥಿನಿಯರು

ಕುಡಿದು ವಾಹನ ಚಲಾಯಿಸಿ ಸಿಕ್ಕಿ ಬಿದ್ದ: ಪೊಲೀಸರ ಮುಂದೆ ಸರ್ಕಾರಕ್ಕೆ ಬೈದ ಕುಡುಕ

ಟೀ ಮಾರಾಟಗಾರ ಮತ್ತು ಮೂವರು ಅಪ್ರಾಪ್ತರಿಂದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ!

ರಾಕಿಂಗ್ ಸ್ಟಾರ್ ಯಶ್  ಹುಟ್ಟುಹಬ್ಬಕ್ಕೆ ಕಟೌಟ್ ಕಟ್ಟುತ್ತಿದ್ದ ವೇಳೆ ವಿದ್ಯುತ್ ಶಾಕ್: ಮೂವರು ಸಾವು, ಮೂವರಿಗೆ ಗಂಭೀರ ಗಾಯ

ಇತ್ತೀಚಿನ ಸುದ್ದಿ

Exit mobile version