ಪ್ರಜ್ವಲ್‌ ದೇವರಾಜ್‌ ಇನ್ನಿಲ್ಲ ಎಂಬ ಸುಳ್ಳು ಸುದ್ದಿ: ಕುಟುಂಬಸ್ಥರಿಂದ ಬೇಸರ

prajwal devaraj
30/05/2024

ಸ್ಯಾಂಡಲ್‌ವುಡ್‌ ನಟ, ಡೈನಾಮಿಕ್‌ ಸ್ಟಾರ್‌ ಪ್ರಜ್ವಲ್‌ ದೇವರಾಜ್‌ ಇನ್ನಿಲ್ಲ  ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಅವರ ಕುಟುಂಬಸ್ಥರು ಈ ಸುಳ್ಳು ಸುದ್ದಿಯಿಂದ ಆತಂಕಕ್ಕೀಡಾದ ಘಟನೆ ನಡೆದಿದೆ.

ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಪ್ರಜ್ವಲ್‌ ದೇವರಾಜ್‌ ಕುಟುಂಬಸ್ಥರು, ಪ್ರಜ್ವಲ್‌ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅವರು ಕ್ಷೇಮವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿಗಳನ್ನು ಹಬ್ಬಿಸಲಾಗಿದೆ. ಪ್ರಜ್ವಲ್ ದೇವರಾಜ್ ಅವರ ಪೋಟೋಗಳನ್ನ ದುರ್ಬಳಕೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜ್ವಲ್ ದೇವರಾಜ್ ನಿಧನರಾಗಿದ್ದಾರೆ ಎಂಬ ಸುದ್ದಿ ಸುದ್ದಿ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು  ಮಾಡಿತ್ತು.  ಆರೋಗ್ಯವಂತ ನಟನ ಬಗ್ಗೆ ಈ ರೀತಿಯ ಸುಳ್ಳು ವದಂತಿಗಳು ಸಲ್ಲದು. ಇದರಿಂದ ಕುಟುಂಬಸ್ಥರು ಹಾಗೂ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಯಾಗುತ್ತದೆ. ಕಿಡಿಗೇಡಿಗಳು ಪ್ರಜ್ವಲ್ ದೇವರಾಜ್ ಆರೋಗ್ಯದ ಬಗ್ಗೆ ಅನಗತ್ಯ ಸುಳ್ಳು ವದಂತಿ ಹಬ್ಬಿಸಿದ್ದಾರೆ. ಈ ಬಗ್ಗೆ ಕಾನೂನು ಸಲಹೆ ಪಡೆದು ದೂರು ನೀಡಲು ದೇವರಾಜ್‌ ಮತ್ತವರ ಆಪ್ತರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಕರಾವಳಿ ಚಿತ್ರದಲ್ಲಿ ಪ್ರಜ್ವಲ್‌ ಬಿಜಿ:

ಸದ್ಯ ಕರಾವಳಿ ಸಿನಿಮಾದ ಶೂಟಿಂಗ್‌ ಕೆಲಸಗಳಲ್ಲಿ ನಟ ಪ್ರಜ್ವಲ್‌ ದೇವರಾಜ್‌ ಬಿಜಿಯಾಗಿದ್ದಾರೆ. ಈಗಾಗಲೇ ಮೇಕಿಂಗ್‌ ಮತ್ತು ಪಾತ್ರವರ್ಗದ ವಿಚಾರವಾಗಿ ಒಂದಷ್ಟು ನಿರೀಕ್ಷೆ ಮೂಡಿಸಿರುವ ಈ ಸಿನಿಮಾತಂಡ, ಇತ್ತೀಚೆಗಷ್ಟೇ ಚಿತ್ರದ ಖಳನ ಪಾತ್ರವನ್ನು ಪರಿಚಯಿಸಿದ್ದರು. ಗುರುದತ್ ಗಾಣಿಗ ನಿರ್ಮಾಣದ ಜೊತೆಗೆ ನಿರ್ದೇಶನ ಮಾಡುತ್ತಿರೋ ಕರಾವಳಿ ಚಿತ್ರಕ್ಕೆ ಶಿಥಿಲ್‌ ಪೂಜಾರಿ ಅವರ ಆಗಮನವಾಗಿದೆ. ಡೈನಾಮಿಕ್ ಪ್ರಿನ್ಸ್ ಎದುರು ತೊಡೆತಟ್ಟಲು ಮಿಸ್ಟರ್ ದುಬೈ ಆಗಿದ್ದ ಶಿಥಿಲ್ ಪೂಜಾರಿ ಖಳನಾಗಿ ಕರಾವಳಿ ಸಿನಿಮಾಕ್ಕೆ ಎಂಟ್ರಿಕೊಟ್ಟಿದ್ದಾರೆ.

ಇನ್ನು ಕರಾವಳಿ ಚಿತ್ರಕ್ಕೆ ಅಭಿಮನ್ಯು ಸದಾನಂದ್ ಕ್ಯಾಮರಾ ಹಿಡಿದರೆ, ಸಚಿನ್ ಬಸ್ರೂರು ಸಂಗೀತ ನೀಡುತ್ತಿದ್ದಾರೆ.

ಇತ್ತೀಚಿನ ಸುದ್ದಿ

Exit mobile version