ಗಜಪಡೆ ದಾಂಧಲೆಗೆ ರೈತರ ಕೃಷಿ ಧ್ವಂಸ: ಅರಣ್ಯ ಇಲಾಖೆ ವಿರುದ್ಧ ರೈತರ ಆಕ್ರೋಶ
ಚಿಕ್ಕಮಗಳೂರು: ಜಿಲ್ಲೆಯ ತರೀಕರೆ ತಾಲೂಕಿನ ನಂದಿಬಟ್ಲು ಗ್ರಾಮದಲ್ಲಿ ಗಜಪಡೆ ದಾಂಧಲೆಯಿಂದ ರೈತರು ಕಂಗೆಟ್ಟಿದ್ದು, ಕಾಡಾನೆಗಳು ಕೃಷಿ ಭೂಮಿಗೆ ದಾಳಿಯಿಟ್ಟು ನಾಶ ಮಾಡುತ್ತಿರುವುದು ರೈತರಿಗೆ ಸಂಕಷ್ಟವಾಗಿ ಪರಿಣಮಿಸಿದೆ.
ಕಾಡಾನೆ ದಾಂಧಲೆಯಿಂದ ಸುಮಾರು ನಾಲ್ಕು ಎಕರೆ ಅಡಿಕೆ, ಬಾಳೆ ನಾಶವಾಗಿದ್ದು, ಹಿಂಡು—ಹಿಂಡಾಗಿ ಬರುವ ಆನೆಗಳು ಕೃಷಿ ಭೂಮಿಯನ್ನು ಧ್ವಂಸ ಮಾಡುತ್ತಿವೆ.ಘಟನೆ ಹಿನ್ನೆಲೆಯಲ್ಲಿ ತಣಿಗೆಬೈಲು ಭದ್ರಾ ವನ್ಯಜೀವಿ ವಿಭಾಗದ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ಇನ್ನೂ ಆನೆಗಳ ಉಪಟಳ ನಿಯಂತ್ರಿಸಲು ಸರ್ಕಾರ ಕ್ರಮಕೈಗೊಳ್ಳಬೇಕು. ನಿರಂತರವಾಗಿ ಆನೆಗಳ ದಾಳಿ ನಡೆಯುತ್ತಿದ್ದರೂ, ಇಲಾಖೆ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ತಕ್ಷಣವೇ ಆನೆ ದಾಳಿಗೆ ಶಾಶ್ವತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka


























