11:09 AM Saturday 31 - January 2026

ದೆಹಲಿಯಲ್ಲಿ ರೈತರ ಐತಿಹಾಸಿಕ ಟ್ರ್ಯಾಕ್ಟರ್ ಪರೇಡ್ | ದೆಹಲಿಯಲ್ಲಿಂದು ಜೈಜವಾನ್, ಜೈಕಿಸಾನ್

26/01/2021

ನವದೆಹಲಿ: ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ  72ನೇ ಗಣರಾಜ್ಯೋತ್ಸವ(ಸಂವಿಧಾನ ದಿನಾಚರಣೆ) ಸಂದರ್ಭದಲ್ಲಿ ರೈತರು  ದೆಹಲಿಯ ರಾಜಪಥದಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸುತ್ತಿದ್ದಾರೆ.

ಸಿಂಘು, ಟಿಕ್ರಿ, ಘಾಜಿಪುರ್ ಗಡಿಯ ಮೂಲಕ ಟ್ರ್ಯಾಕ್ಟರ್‌ ಬರಲಿದೆ. ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಈಗ ಗಣರಾಜ್ಯೋತ್ಸವ ನಡೆಯಲಿರುವ ಪ್ರದೇಶಕ್ಕೂ ಈ ಟ್ರ್ಯಾಕ್ಟರ್ ಪರೇಡ್ ಬರಲಿದೆ.

ಪರೇಡ್ ನಲ್ಲಿ ಭಾಗವಹಿಸಲು ಪಂಜಾಬ್ ರೈತರು ಪ್ರತಿ ಹಳ್ಳಿಯಿಂದಲೂ ಟ್ರ್ಯಾಕ್ಟರ್ ಮೂಲಕ ದೆಹಲಿಗೆ ಆಗಮಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಹಿತಾಸಕ್ತಿ ಕಾಪಾಡಲು ಕೆಲವು ಕಿಡಿಗೇಡಿಗಳು  ಪರೇಡ್ ಗೆ ಹಾನಿ ಮಾಡುವ ಉದ್ದೇಶ ಕಂಡು ಬಂದ ಹಿನ್ನೆಲೆಯಲ್ಲಿ ಬಿಗು ಬಂದೋಬಸ್ತ್ ಕೂಡ ನಡೆಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಕುಂಡ್ಲಿ ಮತ್ತು ಮುರ್ತಾಲ್ ನಡುವಿನ ವಿಶಾಲವಾದ ಪ್ರದೇಶದಲ್ಲಿ ಟ್ರಾಕ್ಟರುಗಳ ಚುಕ್ಕೆ.ಗಳು ಕಾಣುತ್ತಿರುವ ದೃಶ್ಯ ಸೆರೆಯಾಗಿದೆ. ಇನ್ನೂ ಕೆಲವೇ ಕ್ಷಣಗಳಲ್ಲಿ ದೆಹಲಿ ತಲುಪಲಿರುವ ಈ ಲಕ್ಷಾಂತರ ಟ್ರ್ಯಾಕ್ಟರ್‌ಗಳು ಕೃಷಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಭಾಗವಹಿಸಲಿದೆ. ಗಣರಾಜ್ಯೋತ್ಸವ ಪರೇಡ್ ಮುಗಿದ ಕೆಲವೇ ಕ್ಷಣಗಳಲ್ಲಿ ರೈತರ ಟ್ರಾಕ್ಟರ್ ಪರೇಡ್ ಆರಂಭವಾಗಲಿದೆ ಎಂದು  ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ

Exit mobile version