ರೇಣುಕಾಸ್ವಾಮಿ ಹತ್ಯೆ ಪ್ರಕರಣದ A7 ಆರೋಪಿಯ ತಂದೆ ಹೃದಯಾಘಾತದಿಂದ ಸಾವು

chandrappa
15/06/2024

ರೇಣುಕಾಸ್ವಾಮಿ ಹತ್ಯೆ ಪ್ರಕರಣದ A7 ಆರೋಪಿ ಅನುಕುಮಾರ್ ನ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮಗನ ಬಂಧನದಿಂದ ತೀವ್ರವಾಗಿ ನೊಂದಿದ್ದ ಅನುಕುಮಾರ್ ನ ತಂದೆ ಚಂದ್ರಪ್ಪ (55) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.  ಇದೀಗ ಅನುಕುಮಾರ್ ನ ಕುಟುಂಬಸ್ಥರು ಏನು ಮಾಡಬೇಕು ಎನ್ನುವುದು ತೋಚದೇ ಕಣ್ಣೀರು ಹಾಕುತ್ತಿದ್ದಾರೆ.

ಸಾವಿಗೂ ಕೆಲವು ಗಂಟೆಗಳ ಮುನ್ನ ಚಂದ್ರಪ್ಪ ಮಾಧ್ಯಮಗಳೊಂದಿಗೆ  ಮಾತನಾಡಿದ್ದರು.  ನನ್ನ ಮಗ ಏನೂ ತಪ್ಪು ಮಾಡಿಲ್ಲ ಎಂದು ನೊಂದು ಕೊಂಡು ಹೇಳಿಕೆ ನೀಡಿದ್ದರು.

ಇನ್ನೂ ಅನು ಕುಮಾರ್ ಅಕ್ಕ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ,  ಪೊಲೀಸರು ತಮ್ಮನನ್ನು ಅರೆಸ್ಟ್ ಮಾಡಿಲ್ಲ ಅಂದರೆ ಅಪ್ಪ ಬದುಕಿರುತ್ತಿದ್ದ. ಆತನನ್ನು ಕೊನೆ ಬಾರಿ ನೋಡಲು ತಮ್ಮನನ್ನು ಕರೆಸಬೇಕು ಎಂದು ಕಣ್ಣೀರು ಹಾಕಿದ್ದಾರೆ.

ಬೆಳಗ್ಗೆಯಿಂದ ಮಗಾ, ಮಗಾ ಅಂತಾ ಹೇಳ್ತಿದ್ದರು. ಅವನೇ ನಮಗೆ ಫಿಲ್ಲರ್, ಬೇರೆ ಯಾರೂ ಇಲ್ಲ. ಅದೇ ಚಿಂತೆಯಲ್ಲೇ ನಮ್ಮಪ್ಪ ಹಾರ್ಟ್​ ಅಟ್ಯಾಕ್ ಆಗಿ ಸತ್ತೋದ. ನಮಗೆ ಇನ್ನು ಯಾರು ದಿಕ್ಕು ಎಂದು ಕಣ್ಣೀರು ಹಾಕಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version