ಯಾವುದೋ ಧ್ವನಿ ತ್ಯಾಗ ಮಾಡಲು ಹೇಳಿತು ಎಂದು ಮಗನನ್ನೇ ಬಲಿ ನೀಡಿದ ತಂದೆ!: ವಿಚಿತ್ರ ಪ್ರಕರಣ

ಬಲರಾಮ್ ಪುರ: ವ್ಯಕ್ತಿಯೋರ್ವ ತನ್ನ ನಾಲ್ಕು ವರ್ಷ ವಯಸ್ಸಿನ ಮಗನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದ್ದು, ಇದು ಶಂಕಿತ ನರ ಬಲಿ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಛತ್ತೀಸ್ ಗಢದ ಬುಡಕಟ್ಟು ಪ್ರಾಬಲ್ಯದ ಬಲರಾಂಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಮಲೇಶ್ ನಗೆಸಿಯಾ (26) ಎಂಬಾತ ತನ್ನ ಮಗನನ್ನೇ ಬಲಿ ಪಡೆದ ಆರೋಪಿಯಾಗಿದ್ದಾನೆ.
ಊಟದ ನಂತರ, ಕಮಲೇಶ್, ಹೆಂಡತಿ ಮತ್ತು ಅವರ ಇಬ್ಬರು ಮಕ್ಕಳು ತಮ್ಮ ಮನೆಯ ಕೋಣೆಯಲ್ಲಿ ಮಲಗಿದ್ದರು. ಏಕಾಏಕಿ ಎಚ್ಚೆತ್ತುಕೊಂಡ ಕಮಲೇಶ್ ಮನೆಯ ಅಂಗಳದಲ್ಲಿ ಚಾಕುವಿನಿಂದ ಕೋಳಿಯನ್ನು ಕತ್ತರಿಸಿದ್ದಾನೆ. ನಂತರ ಮಲಗಿದ್ದ ತನ್ನ ಹಿರಿಯ ಮಗನನ್ನು ಅಂಗಳಕ್ಕೆ ಕರೆತಂದು ಅವನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಪತ್ನಿ ಮಗು ಎಲ್ಲಿ ಎಂದು ಹುಡುಕಿಕೊಂಡು ಬಂದಾಗ ಮಗುವನ್ನು ಕೊಂದಿರುವುದಾಗಿ ವ್ಯಕ್ತಿ ಹೇಳಿದ್ದ ಎನ್ನಲಾಗಿದೆ.
ಯಾರನ್ನಾದರೂ ತ್ಯಾಗ ಮಾಡುವಂತೆ ಧ್ವನಿಯೊಂದಿ ಕೇಳಿದ್ದು, ಹೀಗಾಗಿ ತಾನು ಈ ಕೃತ್ಯ ನಡೆಸಿರುವುದಾಗಿ ಕಮಲೇಶ್ ಹೇಳಿದ್ದಾನೆ ಎನ್ನಲಾಗಿದೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ಪತ್ನಿ ಹಾಗೂ ತನ್ನ ಕುಟುಂಬದ ಸದಸ್ಯರನ್ನು ತ್ಯಾಗ ಮಾಡುವಂತೆ ಯಾವುದೋ ಧ್ವನಿ ತನ್ನನ್ನು ಕೇಳುತ್ತಿದೆ ಎಂದು ಆತ ಹೇಳುತ್ತಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈತ ಈ ಹಿಂದೆ ತನ್ನ ತಾಯಿಯನ್ನು ಹತ್ಯೆ ಮಾಡಲು ಯತ್ನಿಸಿದ್ದನಂತೆ, ಈ ವೇಳೆ ಕುಟುಂಬದ ಸದಸ್ಯರು ಆತನನ್ನು ತಡೆದಿದ್ದರು ಎನ್ನುವುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97
ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068