ಫೀಸು ಕಟ್ಟಿ ಹೈರಾಣಾದ ಅಪ್ಪ: ಮಗನ ಸ್ಕೂಲ್ ಪುರಾಣ ಹೇಳಿದ ತಂದೆಯ ಪೋಸ್ಟ್ ವೈರಲ್

ಅಕ್ಕಿಯಿಂದ ಹಿಡಿದು ಪೆಟ್ರೋಲ್ ವರೆಗೆ ಪ್ರತಿಯೊಂದೂ ತುಟ್ಟಿಯಾಗಿರುವ ಈ ದಿನಗಳಲ್ಲಿ ಬದುಕು ಸುಲಭ ಅಲ್ಲ. ಅದರಲ್ಲೂ ನಗರ ಪ್ರದೇಶದ ಜೀವನವಂತೂ ಇನ್ನೂ ತುಟ್ಟಿ. ಶಾಲೆಗಳು ಕೂಡ ಹಾಗೆಯೇ. ವರ್ಷಂಪ್ರತಿ ತಮ್ಮ ಫೀಸುಗಳನ್ನು ಹೆಚ್ಚಿಸುತ್ತಾ ಹೋಗುತ್ತಲೂ ಇವೆ. ಈ ನಡುವೆ ಹರಿಯಾಣದ ಗುರುಗ್ರಾಮದ ಉದಿತ್ ಭಂಡಾರಿ ಎಂಬ ವ್ಯಕ್ತಿಯೊಬ್ಬರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ಒಂದು ವೈರಲ್ ಆಗಿದೆ. ಮೂರನೇ ಕ್ಲಾಸ್ ನಲ್ಲಿ ಕಲಿಯುತ್ತಿರುವ ತನ್ನ ಮಗನಿಗೆ ಪ್ರತಿ ತಿಂಗಳು ತಾನು ತುಂಬುತ್ತಿರುವ ಪೀಸ್ ಅನ್ನು ಅವರು ಹೇಳಿಕೊಂಡಿದ್ದು ನೆಟ್ಟಿಗರು ಹೌಹಾರಿದ್ದಾರೆ.
ಗುರುಗ್ರಾಮದ ಪ್ರತಿಷ್ಠಿತ ಸಿಬಿಎಸ್ಇ ಶಾಲೆಯಲ್ಲಿ ಉದಿತ್ ಅವರ ಮಗ ಓದುತ್ತಿದ್ದಾನೆ. ಆದರೆ ತಿಂಗಳಲ್ಲಿ 30,000 ಫೀಸ್ ಕಟ್ಟಬೇಕು. ಪ್ರತಿ ವರ್ಷ ಶಾಲಾ ಪೀಸು 10 ಶೇಕಡಾ ಹೆಚ್ಚುತ್ತಿದೆ. ಇದೇ ರೀತಿ ಹೆಚ್ಚಳ ಮುಂದುವರಿದರೆ ತನ್ನ ಮಗ 12ನೇ ತರಗತಿಗೆ ತಲುಪುವಾಗ ಒಂಬತ್ತು ಲಕ್ಷ ರೂಪಾಯಿ ಫೀಸು ತುಂಬಬೇಕಾಗುತ್ತದೆ ಎಂದು ಉದಿತ್ ಬರೆದಿದ್ದಾರೆ. ತನ್ನ ಮಗ ಕಲಿಯುತ್ತಿರುವ ಶಾಲೆ ಪ್ರತಿ ವರ್ಷ 10 ಶೇಕಡಾ ಫೀಸು ಹೆಚ್ಚಿಸುತ್ತದೆ. ಆದರೂ ಹೀಗೆ ಹೆಚ್ಚಿಸುವುದು ಯಾಕೆ ಎಂದು ಅದು ಹೇಳುತ್ತಲೂ ಇಲ್ಲ. ಒಂದು ವೇಳೆ ಹೆತ್ತವರು ಈ ಬಗ್ಗೆ ಪ್ರತಿಭಟಿಸಿದರೆ ನಿಮ್ಮ ಮಕ್ಕಳನ್ನು ಫೀಸ್ ಕಡಿಮೆ ಇರುವ ಶಾಲೆಗೆ ಸೇರಿಸಿ ಎಂದು ಹೇಳುತ್ತಾರೆ ಎಂದು ಉದಿತ್ ಬರೆದಿದ್ದಾರೆ. ಇದಕ್ಕೆ ಅನೇಕ ಮಂದಿ ಪ್ರತಿಕ್ರಿಯಿಸಿದ್ದಾರೆ.
ಮುಖ್ಯವಾಗಿ ಸರಕಾರ ಶಾಲೆಯ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು ಮತ್ತು ಮನಬಂದಂತೆ ಶುಲ್ಕ ಏರಿಸುವ ಖಾಸಗಿ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅನೇಕರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth