ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 20 ಜನರ ದಾರುಣ ಸಾವು
ಥಾಯ್ಲೆಂಡ್: ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ 20 ಜನ ಸಾವನ್ನಪ್ಪಿದ ಘಟನೆ ಮಧ್ಯ ಥಾಯ್ಲೆಂಡ್ ನ ಪಟಾಕಿ ಕಾರ್ಖಾನೆಯಲ್ಲಿ ನಡೆದಿದೆ. ಸ್ಫೋಟದಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಥಾಯ್ ಬಿಬಿಎಸ್ ಪ್ರಕಾರ, ಬ್ಯಾಂಕಾಕ್ ನಿಂದ ಉತ್ತರಕ್ಕೆ 120 ಕಿಮೀ (74.56 ಮೈಲುಗಳು) ಸುಪಾನ್ ಬುರಿಯ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.
ಈ ದುರ್ಘಟನೆಯಲ್ಲಿ ಸುಮಾರು ಏಳು ಮಂದಿ ಗಾಯಗೊಂಡಿದ್ದು, ಅವರನ್ನು ಪ್ರಾಂತ್ಯದ ಚಾವೊ ಫ್ರಾಯ ಯೊಮ್ಮಾರತ್ ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಖಾನೆಯಲ್ಲಿ”ಎಲ್ಲಾ ಕಾರ್ಮಿಕರು ಸಾವಿಗೀಡಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ, ಈವರೆಗೆ ಬದುಕುಳಿದವರ ಬಗ್ಗೆ ಯಾವುದೇ ಮಾಹಿತಿಗಳು ಸಿಕ್ಕಿಲ್ಲ ಎಂದು ಪ್ರಾಂತೀಯ ಗವರ್ನರ್ ನಟ್ಟಪಟ್ ಸುವಾನ್ಪ್ರತೀಪ್ ರಾಯಿಟರ್ಸ್ ಗೆ ತಿಳಿಸಿದರು.
ಬೆಂಕಿಯನ್ನು ನಿಯಂತ್ರಿಸಲಾಗಿದೆ ಮತ್ತು ಕಾರ್ಮಿಕರು ನಿಖರವಾದ ಸಾವುನೋವುಗಳ ಸಂಖ್ಯೆಯನ್ನು ಖಚಿತಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

























