ಪ್ರಚಾರ ಆರಂಭಿಸಿದ ಮೊದಲ ದಿನವೇ ಅಸಮಾಧಾನ ಸ್ಟೋಟ ಎದುರಿಸಿದ ಕೈ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ

ಚಿಕ್ಕಮಗಳೂರು : ಉಡುಪಿ–ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕದನ ಕ್ಷಣ ಕ್ಷಣಕ್ಕೂ ರಂಗೇರಿದೆ. ಇಂದಿನಿಂದ ಚಿಕ್ಕಮಗಳೂರು ಜಿಲ್ಲೆಯಿಂದ ಕೈ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಪ್ರಚಾರ ಆರಂಭಿಸಿದ್ದಾರೆ.
ಮೊದಲ ದಿನವೇ ಜಯಪ್ರಕಾಶ್ ಹೆಗ್ಡೆ ಅಸಮಾಧಾನ ಸ್ಟೋಟ ಎದುರಿಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಸ್ಪೋಟಗೊಂಡಿದೆ.
ಕಾರ್ಯಕರ್ತರ ಸಭೆಯಲ್ಲಿ ಮಾಜಿ ಎಂಎಲ್ ಸಿ ಗಾಯತ್ರಿ ಶಾಂತೇಗೌಡ ಅವರು ನಾಯಕರ ವಿರುದ್ಧ ಮುಸಿಸಿಕೊಂಡಿದ್ದು, ವೇದಿಕೆ ಬಿಟ್ಟು ಕಾರ್ಯಕರ್ತರೊಂದಿಗೆ ಕುಳಿತಿದ್ದರು.
ಸಚಿವ ಕೆ.ಜೆ. ಜಾರ್ಜ್, ಶಾಸಕರಾದ ಹೆಚ್.ಡಿ.ತಮ್ಮಯ್ಯ ಕರೆದರೂ ಅವರು ವೇದಿಕೆಗೆ ಬರಲಿಲ್ಲ. ಕೊನೆಗೆ ಸಚಿವ ಜಾರ್ಜ್ ಅವರೇ ವೇದಿಕೆ ಬಿಟ್ಟು ತೆರಳಿ ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡರನ್ನು ವೇದಿಕೆಗೆ ಕರೆತಂದಿದ್ದಾರೆ.
ಚಿಕ್ಕಮಗಳೂರು ನಗರದ ಆದ್ರಿಕಾ ಹೊಟೇಲ್ ನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth