4:52 PM Thursday 18 - December 2025

ವಲಸೆ: ರಾಫಾ ಕ್ರಾಸಿಂಗ್ ಮೂಲಕ ಗಾಝಾದಿಂದ ಈಜಿಪ್ಟ್ ಗೆ ಹೊರಟ ವಿದೇಶಿಯರು

01/11/2023

ಅಕ್ಟೋಬರ್ 7 ರಂದು ಇಸ್ರೇಲ್-ಹಮಾಸ್ ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ ಈಜಿಪ್ಟ್ ರಫಾ ಕ್ರಾಸಿಂಗ್ ಅನ್ನು ತೆರೆದ ನಂತರ ಹಲವಾರು ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಯುದ್ಧ ಪೀಡಿತ ಗಾಝಾವನ್ನು ತೊರೆಯಲು ಪ್ರಾರಂಭಿಸಿದ್ದಾರೆ ಎಂದು ಎಎಫ್ ಪಿ ವರದಿಗಾರರು ತಿಳಿಸಿದ್ದಾರೆ.

ಈಜಿಪ್ಟ್ ನೊಂದಿಗಿನ ಗಾಝಾದ ದಕ್ಷಿಣ ಗಡಿಯಲ್ಲಿರುವ ರಫಾ ಮೂಲಕ ಎಷ್ಟು ಜನರು ಹೊರಡಲು ಸಾಧ್ಯವಾಯಿತು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಆದರೆ ಘಟನಾ ಸ್ಥಳದ ಲೈವ್ ತುಣುಕುಗಳು ಟರ್ಮಿನಲ್ ನ ಫೆಲೆಸ್ತೀನ್ ಭಾಗಕ್ಕೆ ಜನರ ಗುಂಪನ್ನು ಪ್ರವೇಶಿಸುತ್ತಿರುವುದನ್ನು ತೋರಿಸಿದೆ.
ಈಜಿಪ್ಟ್ ನಿಂದ ಗಾಝಾಗೆ 200 ಕ್ಕೂ ಹೆಚ್ಚು ಟ್ರಕ್‌ಗಳು ದಾಟಿ ಹೋಗಿದ್ದರೂ, ಹಾನಿಗೊಳಗಾದ ಪ್ರದೇಶದಿಂದ ಪಲಾಯನ ಮಾಡಲು ಯಾರಿಗೂ ಅವಕಾಶ ನೀಡಲಾಗಿಲ್ಲ. ಸುಮಾರು 400 ವಿದೇಶಿಯರು ಮತ್ತು ದ್ವಿ ಪ್ರಜೆಗಳು ಬುಧವಾರ ಗಡಿ ದಾಟುವ ನಿರೀಕ್ಷೆಯಿದೆ.

ಅಕ್ಟೋಬರ್ 7 ರ ಹಮಾಸ್ ದಾಳಿಗೆ ಪ್ರತಿಕ್ರಿಯೆಯಾಗಿ 2.4 ಮಿಲಿಯನ್ ಜನರು ಮೂರು ವಾರಗಳಿಗಿಂತ ಹೆಚ್ಚು ಕಾಲ ನಿರಂತರ ಇಸ್ರೇಲಿ ಬಾಂಬ್ ದಾಳಿಯನ್ನು ಸಹಿಸಿಕೊಂಡಿರುವ ಗಾಝಾ ಪಟ್ಟಿಯಲ್ಲಿ 44 ದೇಶಗಳ ಪಾಸ್ ಪೋರ್ಟ್ ಹೊಂದಿರುವವರು ಮತ್ತು ವಿಶ್ವಸಂಸ್ಥೆಯ ಸಂಸ್ಥೆಗಳು ಸೇರಿದಂತೆ 28 ಏಜೆನ್ಸಿಗಳು ವಾಸಿಸುತ್ತಿವೆ ಎಂದು ವಿದೇಶಿ ಸರ್ಕಾರಗಳು ತಿಳಿಸಿವೆ.

ಇತ್ತೀಚಿನ ಸುದ್ದಿ

Exit mobile version