ತರಬೇತಿ ವೈದ್ಯೆಯ ಅತ್ಯಾಚಾರ ಕೊಲೆ ಕೇಸ್: ಆರೋಪಿ ವಿರುದ್ಧ ಮೊದಲ ಪತ್ನಿಯ ತಾಯಿಯಿಂದ ಗಂಭೀರ ಆರೋಪ

20/08/2024

ಕೋಲ್ಕತ್ತಾ ವೈದ್ಯ ವಿದ್ಯಾರ್ಥಿನಿಯ ಹತ್ಯೆಗೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ಸಂಜಯ್ ರಾಯ್ ವಿರುದ್ಧ ಆತನ ಮೊದಲ ಪತ್ನಿಯ ತಾಯಿ ಗಂಭೀರ ಆರೋಪ ಮಾಡಿದ್ದಾರೆ. ಪತ್ನಿಯಾಗಿದ್ದ ತನ್ನ ಮಗಳನ್ನು ಆತ ನಿರಂತರ ಪೀಡಿಸಿದ್ದ ಮತ್ತು ಮೂರು ತಿಂಗಳ ಗರ್ಭವನ್ನು ಛೇದಿಸಿದ್ದ. ಆತನನ್ನು ಗಲ್ಲಿಗೇರಿಸಬೇಕು ಎಂದು ಆ ತಾಯಿ ಆಗ್ರಹಿಸಿದ್ದಾರೆ.

ಮದುವೆಯಾದ ಆರಂಭದ ಆರು ತಿಂಗಳಲ್ಲಿ ಮಗಳು ಚೆನ್ನಾಗಿದ್ದಳು. ಮಗಳು ಮೂರು ತಿಂಗಳ ಗರ್ಭಿಣಿಯಾದ ಬಳಿಕ ಗರ್ಭಪಾತ ನಡೆಸಿದ. ಮಗಳ ಮೇಲೆ ದೌರ್ಜನ್ಯ ನಡೆಸಿದಾಗ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲಾಯಿತು. ದೌರ್ಜನ್ಯ ನಿರಂತರವಾಗಿ ನಡೆದ ಕಾರಣದಿಂದ ಮಗಳು ಕಾಯಿಲೆ ಪೀಡಿತಳಾದಳು.

ಔಷಧಕ್ಕೆ ನಾನೇ ಖರ್ಚು ಮಾಡಿದೆ. ಅವನು ಕೆಟ್ಟವ. ವೈದ್ಯೆಯನ್ನು ಹತ್ಯೆ ಮಾಡಿದ ವಿಚಾರದ ಬಗ್ಗೆ ನಾನು ಮಾತಾಡಲ್ಲ. ಅದನ್ನು ಆತ ಒಬ್ಬನೇ ಮಾಡಿರುವ ಸಾಧ್ಯತೆ ಇಲ್ಲ ಎಂದು ಎ ಎನ್ ಐ ಗೆ ನೀಡಿದ ಸಂದರ್ಶನದಲ್ಲಿ ಆ ತಾಯಿ ಹೇಳಿದ್ದಾರೆ. ಆರ್ ಜಿ ಕಾರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಆಗಸ್ಟ್ 10ರಂದು ವೈದ್ಯಕೀಯ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಲಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version