ಮಲೆನಾಡ ಪಂಚನದಿಗಳಲ್ಲಿ ಹಾರುತ್ತಿರುವ ಮೀನುಗಳು!

fish
15/06/2025

ಚಿಕ್ಕಮಗಳೂರು :  ಕಾಫಿನಾಡಲ್ಲಿ ಭಾರೀ ಮಳೆ ಹಿನ್ನೆಲೆ ಮಲೆನಾಡ ಪಂಚನದಿಗಳಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿದೆ. ಈ ಭಾರೀ ಮಳೆಗೆ ನದಿಗಳಲ್ಲಿ ಮೀನುಗಳ ನರ್ತನ ಕಣ್ಣಿಗೆ ಹಬ್ಬ ಉಂಟು ಮಾಡಿದೆ.

ನೀರಿನಿಂದ ಮೇಲೆ ಹಾರ್ತಿರೋ ಮೀನುಗಳ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಸಾಮಾನ್ಯವಾಗಿ  ಮುಂಗಾರು ಆರಂಭದಲ್ಲಿ ಮಾತ್ರ ನೀರಿನಲ್ಲಿ ಮೀನುಗಳ ನರ್ತನವನ್ನು ಕಾಣಬಹುದಾಗಿದೆ.

ಮೊಟ್ಟೆ ಇಡಲು ನೀರಿನಿಂದ ಜಿಗಿದು ಅಕ್ಕಪಕ್ಕದ ಜಮೀನುಗಳಿಗೆ ಹೋಗೋ ಮೀನುಗಳು, ಕಳಸ ತಾಲೂಕಿನ ಅಂಬತೀರ್ಥದಲ್ಲಿ ಪ್ರತಿ ವರ್ಷ ಕಾಣಸಿಗುತ್ತವೆ.

ಭೋರ್ಗರೆದು ಹರಿಯುವ ನೀರಿನಲ್ಲಿ ಜಿಗಿಯುವ ಮೀನುಗಳ ನರ್ತನ ನೋಡಿ ಮಲೆನಾಡಿಗರು, ಪ್ರವಾಸಿಗರು ಆನಂದಿಸಿದ್ದಾರೆ.


ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW

ಇತ್ತೀಚಿನ ಸುದ್ದಿ

Exit mobile version