7:42 AM Saturday 25 - October 2025

55ರ ಆಂಟಿ ಜೊತೆ 33ರ ಯುವಕನಿಗೆ ಸಂಬಂಧ:  ಆಕೆ ಗಂಡನ ಕೊಂದು ಸುಟ್ಟು ಹಾಕಿದ್ದ ಮೂವರ ಬಂಧನ…!

chikkamagaluru crime news
08/06/2025

ಚಿಕ್ಕಮಗಳೂರು: 33ರ ಯುವಕನಿಗೆ 55ರ ಆಂಟಿ ಜೊತೆಗಿದ್ದ ಅಕ್ರಮ ಸಂಬಂಧದ ಹಿನ್ನೆಲೆ ಆಕೆ ಗಂಡನನ್ನ ಕೊಂದು ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದ ಪ್ರೇಮಿ ಸೇರಿ ಮೂವರನ್ನ ಪೊಲೀಸರು ಹೆಡೆಮುರಿ ಕಟ್ಟಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಕಂಸಾಗರ ಗೇಟ್ ಬಳಿ ನಡೆದಿದೆ.

ಮೃತನನ್ನ ಸುಬ್ರಹ್ಮಣ್ಯ ಎಂದು ಗುರುತಿಸಲಾಗಿದೆ. ಕಳೆದೊಂದು ವಾರದ ಹಿಂದೆ ಕಡೂರು ತಾಲೂಕಿನ ಕಂಸಾಗರ ಗೇಟ್ ಬಳಿ ಅನಾಮಧೇಯ ವ್ಯಕ್ತಿಯ ಸುಟ್ಟು ಕರಕಲಾಗಿದ್ದ ದೇಹದ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ನಾಪತ್ತೆ ಪ್ರಕರಣ. ಅನಾಮಧೇಯ ವ್ಯಕ್ತಿಯ ಮೃತದೇಹದ ಪ್ರಕರಣವನ್ನ ಬೆನ್ನೆತ್ತಿದ್ದ ಕಡೂರು ಪೊಲೀಸರಿಗೆ ವಿಚಿತ್ರ ಕೊಲೆ ಪ್ರಕರಣ ಪತ್ತೆಯಾಗಿದೆ.

33ರ ಯುವಕನಿಗೆ 55ರ ಆಂಟಿ ಜೊತೆಗಿದ್ದ ಅಕ್ರಮ ಸಂಬಂಧಕ್ಕಾಗಿ ಆಕೆಯ ಪತಿಯನ್ನೇ ಯುವಕ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ಹೊರಬಂದಿದೆ. ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪೆಟ್ರೋಲ್ ನಿಂದ ಸುಟ್ಟು ತಲೆಮರೆಸಿಕೊಂಡಿದ್ದ 3 ಜನ ಆರೋಪಿಗಳು ಕಡೂರು ಪೊಲೀಸರ ಅತಿಥಿಯಾಗಿದ್ದಾರೆ. ಕಡೂರು ಪಟ್ಟಣದ ನಿವಾಸಿ ಮೀನಾಕ್ಷಮ್ಮ ಎಂಬುವರು ಠಾಣೆಗೆ ಹಾಜರಾಗಿ ತನ್ನ ಗಂಡ ಸುಬ್ರಹ್ಮಣ್ಯ ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಪೊಲೀಸರು ತನಿಖೆಯನ್ನ ತೀವ್ರ ಗೊಳಿಸಿದ್ದರು. ಕೊಲೆಯಾದ ವ್ಯಕ್ತಿಯ ಗುರುತು ಹಾಗೂ ಕೊಲೆ ಆರೋಪಿಗಳ ಪತ್ತೆ ಹಾಗೂ ಕಾಣೆಯಾದ ಸುಬ್ರಹ್ಮಣ್ಯರವರ ಪತ್ತೆ ಸಂಬಂಧ ಕಡೂರು ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಗಳನ್ನೊಳಗೊಂಡ 2 ಪ್ರತ್ಯೇಕ ತಂಡ ನೇಮಕ ಮಾಡಲಾಗಿತ್ತು.

ಎರಡೂ ಪ್ರಕರಣಗಳ ಸಂಬಂಧ ತನಿಖೆ ವೇಳೆ ತಾಂತ್ರಿಕ ಹಾಗೂ ವಿವಿಧ ಆಯಾಮಗಳ ತನಿಖೆಯಲ್ಲಿ ಕಾಣೆ ಹಾಗೂ ಕೊಲೆಯಾದ ವ್ಯಕ್ತಿ ಒಬ್ಬನೇ ಅನ್ನೋದು ಪೊಲೀಸರಿಗೆ ಖಚಿತವಾಗಿತ್ತು. ತನಿಖೆ ಮುಂದುವರೆದು ಕಡೂರು ಪಟ್ಟಣದ ಪ್ಲೇಗಿನಮ್ಮ ದೇವಸ್ಥಾನದ ಹತ್ತಿರದ ವಾಸಿ ಪ್ರದೀಪ್ ಆಚಾರ್, ಸಿದ್ದೇಶ್ ಹಾಗೂ ವಿಶ್ವಾಸ್ ರನ್ನು ವಶಕ್ಕೆ ಪಡೆದು ಕೂಲಂಕಶವಾಗಿ ವಿಚಾರಣೆಗೊಳಪಡಿಸಿದಾಗ ಕೊಲೆಗೆ ಖಚಿತ ಕಾರಣ ತಿಳಿದು ಬಂದಿದೆ.

ಮೊದಲನೇ ಆರೋಪಿ ಪ್ರದೀಪ್  ಹಾಗೂ ಕೊಲೆಯಾದ ವ್ಯಕ್ತಿಯ ಹೆಂಡತಿಗೂ ಅಕ್ರಮ ಸಂಬಂಧವಿದ್ದು, ಈ ವಿಚಾರದಲ್ಲಿ ಕೊಲೆಯಾದ ವ್ಯಕ್ತಿ ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಎಂದು ಪ್ರದೀಪ್ ಸ್ನೇಹಿತರಿಗೆ ಹಣದ ಆಮೀಷವೊಡ್ಡಿ ಅವರ ಸಹಾಯ ಪಡೆದು ಕಂಸಾಗರ ಗೇಟ್ ಬಳಿ  ಮಾರುತಿ ಓಮಿನಿ ಕಾರಿನಲ್ಲಿ ಸುಬ್ರಹ್ಮಣ್ಯ ರವರನ್ನು ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ನಂತರ ಶವವನ್ನು ಸೌದೆ ಮತ್ತು ಪೆಟ್ರೋಲ್ ಬಳಿಸಿ ಸುಟ್ಟುಹಾಕಿದ್ದಾಗಿ ತನಿಖೆಯಿಂದ ತಿಳಿದುಬಂದಿದೆ. 3 ಜನ ಆರೋಪಿಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಮಾರುತಿ ಓಮಿನಿ ಕಾರನ್ನು ವಶಕ್ಕೆ ಪಡೆದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version