ಫಲೂದದಲ್ಲಿ ಮಿಸುಕಾಡುತ್ತಿರುವ ಹುಳ ಪತ್ತೆ: ಲುಲು ಮಾಲ್ ವಿರುದ್ಧ ಗ್ರಾಹಕರಿಂದ ಆಕ್ರೋಶ

viral video
30/03/2024

ಬೇಸಿಗೆಯ ಬಿಸಿಗೆ ತಂಪಾಗಲು ಲುಲು ಮಾಲ್ ನಲ್ಲಿ ಫಲೂದ ಖರೀದಿಸಿದ ಗ್ರಾಹಕರಿಗೆ ಶಾಕ್ ಕಾದಿದ್ದು, ಫಲೂದದಲ್ಲಿ ಹುಳ ಪತ್ತೆಯಾಗಿದ್ದು,  ಗ್ರಾಹಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ನೋದ ಲುಲು ಮಾಲ್‌ನಲ್ಲಿರುವ ನೇಷನ್​​​​ ಶಾಪ್ ​​​​ನ ಫಲೂದದಲ್ಲಿ ಹುಳು ಪತ್ತೆಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಳಪೆ ಮಟ್ಟದ ಆಹಾರ ಪೂರೈಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತಿನ್ನುವ ಆಹಾರದಲ್ಲಿ ಹುಳು ಪತ್ತೆಯಾಗಿರುವುದು ಸಣ್ಣ ವಿಷಯವಲ್ಲ, ಇದು ಬೇಜವಾಬ್ದಾರಿತನವಾಗಿದೆ. ಈ ಸಂಬಂಧ ತಕ್ಷಣವೇ ಸಂಬಂಧಪಟ್ಟ ಇಲಾಖೆ ಕ್ರಮಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಈ ಸಂಬಂಧ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಫಲೂದಲ್ಲಿ ಹುಳವೊಂದು ಮಿಸುಕಾಡುತ್ತಿರುವ ದೃಶ್ಯ ಕಂಡು ಬಂದಿದೆ.  ಇದೇನು ಎಂದು ಗ್ರಾಹಕರು, ನೇಷನ್​​​​ ಶಾಪ್ ನ ಸಿಬ್ಬಂದಿಯನ್ನು ಪ್ರಶ್ನಿಸುತ್ತಿರುವುದನ್ನು ಕಾಣಬಹುದಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version