10:36 AM Tuesday 21 - October 2025

ಮಣ್ಣಿನಡಿಯಲ್ಲಿ ಸಿಲುಕಿ ಮೂವರು ಬಾಲಕಿಯರು, ಓರ್ವ ಬಾಲಕನ ದಾರುಣ ಸಾವು

09/11/2020

ಭೋಪಾಲ್:  ಚರಂಡಿಯ ಮಣ್ಣು ಕುಸಿದ ಪರಿಣಾಮ,  ಮೂವರು ಬಾಲಕಿಯರು ಮತ್ತು ಓರ್ವ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಸೋಮವಾರ ಸುಖಿ ಸೆವಾನಿಯಾ ಪ್ರದೇಶದ  ಬರ್ಖೇಡಿ ಗ್ರಾಮದಲ್ಲಿ ನಡೆದಿದೆ.

ದೀಪಾವಳಿಗೆ ಹಳದಿ ಬಣ್ಣದ ಮಣ್ಣನ್ನು ಅಗೆಯುತ್ತಿದ್ದ ಸಂದರ್ಭದಲ್ಲಿ ಮಕ್ಕಳು ಮಣ್ಣಿನಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.  ಮಣ್ಣಿನಡಿಯಲ್ಲಿ ಸಿಲುಕಿದ ಎಲ್ಲ ಮಕ್ಕಳು 12 ವರ್ಷದೊಳಗಿನವರು ಎಂದು ತಿಳಿದು ಬಂದಿದೆ ಎಂದು ಭೋಪಾಲ್  ವಲಯ 2ರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಬಧೋರಿಯಾ ತಿಳಿಸಿದ್ದಾರೆ.

ಮಣ್ಣಿನಡಿಗೆ ಮಕ್ಕಳು ಬಿದ್ದ ತಕ್ಷಣವೇ 7 ಮಕ್ಕಳ ಪೈಕಿ ಓರ್ವ ಪರಾಗಿದ್ದು, ಆತ ತಕ್ಷಣವೇ ಅಲ್ಲಿಂದ ಓಡಿ ಬಂದು  ಸಮೀಪದ ಹಳ್ಳಿಯಿಂದ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.  ಈ ವೇಳೆ ತಕ್ಷಣವೇ ಸ್ಥಳಕ್ಕಾಗಿಮಿಸಿದ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಮಕ್ಕಳನ್ನು ಮಣ್ಣಿನಡಿಯಿಂದ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ.

ಮಕ್ಕಳನ್ನು ಹಮಾಡಿಯಾ ಆಸ್ಪತ್ರೆಗೆ ಸಾಗಿಸು ಸಂದರ್ಭದಲ್ಲಿ ದಾರಿಯಲ್ಲಿ ಮೂವರು ಬಾಲಕಿಯರು ಹಾಗೂ ಓರ್ವ ಬಾಲಕ ಮೃತಪಟ್ಟಿದ್ದಾರೆ.  ಇತರ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ಈ ಘಟನೆ ಸಂಬಂಧ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾನ್ ಮೃತ ಮಕ್ಕಳ ಸಾವಿಗೆ ಸಂತಾಪ ಸೂಚಿಸಿದ್ದು,  ಮಕ್ಕಳ ಕುಟುಂಬಸ್ಥರಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version