“ಭಾರತ ಗ್ರೇಟ್ ಆದ್ರೆ ಅಲ್ಲಿಗೇ ಹೋಗಿ ಇಲ್ಯಾಕೆ ಬರ್ತೀರಿ”: ಅಮೆರಿಕ ಮಹಿಳೆಯಿಂದ ಭಾರತೀಯ ಮಹಿಳೆಯರಿಗೆ ಹಲ್ಲೆ

esmi armendarez upton
26/08/2022

ಜನಾಂಗೀಯ ದಾಳಿ ಅಮೆರಿಕ ಮತ್ತೆ ಸುದ್ದಿಯಾಗಿದ್ದು,  ಭಾರತೀಯ-ಅಮೆರಿಕನ್ ಮಹಿಳೆಯರ ಮೇಲೆ ಮೆಕ್ಸಿಕನ್  ಅಮೆರಿಕನ್ ಮಹಿಳೆಯೊಬ್ಬಳು ಹಲ್ಲೆ ನಡೆಸಿ, ಭಾರತಕ್ಕೆ ಹೋಗಿ ಎಂದು ನಿಂದಿಸಿರುವ ಘಟನೆಯೊಂದು ನಡೆದಿದೆ.

ಘಟನೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮಹಿಳೆಯನ್ನು ಅಮೆರಿಕ ಪೊಲೀಸರು ಬಂಧಿಸಿದ್ದಾರೆ.  ನಾನು ಭಾರತೀಯರನ್ನು ದ್ವೇಷಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ ಮಹಿಳೆ ನಾಲ್ವರು ಅಮೆರಿಕನ್ ಭಾರತೀಯರ ಮೇಲೆ ಹಲ್ಲೆ ನಡೆಸಿದ್ದಾಳೆ. ಭಾರತೀಯರಾದ ನೀವೇಕೆ ಇಲ್ಲಿಗೆ ಬರುತ್ತೀರಿ ಎಂದು ಕಿರುಚಾಡಿದ ಆಕೆ ನಾಲ್ವರು  ಅಮೆರಿಕನ್  ಭಾರತೀಯ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾಳೆ. ಈಕೆಯ ಕೃತ್ಯವನ್ನು ವಿಡಿಯೋ ಮಾಡಿದ ವೇಳೆ ಮೊಬೈಲ್ ಗೆ ಕೂಡ ಹೊಡೆದಿದ್ದಾಳೆ.

ಭಾರತ ತುಂಬಾ ಚೆನ್ನಾಗಿದೆ ಅಂತ ಹೇಳ್ತೀರಿ, ಮತ್ತೆ ಯಾಕೆ ಇಲ್ಲಿಗೆ ಬರುತ್ತೀರಿ? ಎಂದು ಪ್ರಶ್ನಿಸಿದ ಆಕೆ, ನಾನು ನಿಮ್ಮನ್ನು ದ್ವೇಷಿಸುತ್ತೇನೆ. ನೀನು ನನಗೆ ಇಷ್ಟ ಇಲ್ಲ, ಇಲ್ಲಿಂದ ಹೊರಟು ಹೋಗಿ ಎಂದು ರಂಪಾಟ ಮಾಡಿದ್ದಾಳೆ.

ಅಮೆರಿಕದಲ್ಲಿ ಭಾರತೀಯರನ್ನು ಅಮೆರಿಕ ಮಹಿಳೆ ಕೀಳಾಗಿ ನೋಡಿದ್ದು ಭಾರೀ ಚರ್ಚೆಗಳಿಗೆ ಕಾರಣವಾಗಿದೆ.  ಭಾರತದಲ್ಲಿ ಜಾತಿಯ ಹೆಸರಿನಲ್ಲಿ ಭಾರತೀಯರನ್ನೇ ಸಮಾನವಾಗಿ ಕಾಣದಂತಹ ಸ್ಥಿತಿಗಳನ್ನೇ ಖಂಡಿಸದ ಸ್ಥಿತಿ ಇರೋವಾಗ ಅಮೆರಿಕದಲ್ಲಿನ ಘಟನೆಯನ್ನು ಹೇಗೆ ಖಂಡಿಸುತ್ತಾರೆ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version