ಮೂಡಿಗೆರೆ ತಾಲೂಕು ಹೋಂ ಸ್ಟೇ  ಮಾಲೀಕರ ಸಂಘದ  ಅಧ್ಯಕ್ಷರಾಗಿ ಜಿ.ಎಂ. ಜಗದೀಶ್  ಆಯ್ಕೆ

mudigere
09/06/2025

ಮೂಡಿಗೆರೆ: ತಾಲೂಕು ಹೋಂಸ್ಟೇ ಮಾಲೀಕರ ಸಂಘದ ಅಧ್ಯಕ್ಷರಾಗಿ ಜಿ.ಎಂ.ಜಗದೀಶ್ ಅವಿರೋಧ ಆಯ್ಕೆಯಾಗಿದ್ದಾರೆ.

ಇಂದು ಕ್ಯಾಪ್ರಿ ರೆಟ್ರೀಟ್ ನಡೆದ ಸಭೆಯಲ್ಲಿ  ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ರಂಜಾನ್ ಅಜಿತ್ ಕುಮಾರ್  ಪ್ರಧಾನ ಕಾರ್ಯದರ್ಶಿ  ರಾಘವೇಂದ್ರ ಕೆಸವಳಲು, ಖಜಾಂಚಿ   ಬಾಳೆಹಳ್ಳಿ ಸತೀಶ್, ಸಹ ಕಾರ್ಯದರ್ಶಿಯಾಗಿ  ದೀಕ್ಷಿತ್ ಚಿಪ್ಪರ್ಗುತ್ತಿ, ನಿರ್ದೇಶಕರಾಗಿ, ಕಾರ್ತಿಕ್ ಪಟದೂರು, ವಿಕಾಸ್ ಕೆ ವಿ, ಸಂಜಯ್ ಕೊಟ್ಟಿಗೆಹಾರ, ಪವಿತ್ರ ಎನ್ ಸಿ, ಪ್ರಶಾಂತ್ ಬಿ ಆರ್ ವರನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ  ಜಿ.ಎಂ.ಜಗದೀಶ್  ತಾಲೂಕಿನಲ್ಲಿರುವ  ಎಲ್ಲಾ ಹೋಂಸ್ಟೇ  ಸಂಘದಲ್ಲಿ ನೋಂದಣಿ ಮಾಡಿಕೊಳ್ಳುವಂತೆ  ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯಿಂದ ನೊಂದಣಿ ಆಗದೆ  ಹೋಂ ಸ್ಟೇ ನಡೆಸುತ್ತಿರುವರ ಬಗ್ಗೆ  ಪತ್ತೆ ಹಚ್ಚಿ  ದೂರು ನೀಡಲಾಗುವುದು ಅನಧಿಕೃತ ಹೋಂಸ್ಟೇಗಳು  ಯಾವುದಾದರೂ ಇದ್ದಲ್ಲಿ  ಕೂಡಲೇ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version