3:13 AM Wednesday 15 - October 2025

ಮಾರಕಾಸ್ತ್ರ, ಖಾರದ ಪುಡಿ ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದ ಗ್ಯಾಂಗ್ ಅರೆಸ್ಟ್!

police
12/02/2024

ಶಿವಮೊಗ್ಗ: ದರೋಡೆಗೆ ಹೊಂಚು ಹಾಕುತ್ತಿದ್ದ ಗ್ಯಾಂಗ್ ವೊಂದನ್ನು ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಬಳಿಯ ಎಗ್ಸಿಬಿಷನ್ ಗ್ರೌಂಡ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಅಖ್ರಿ ಖಾನ್ ಅಲಿಯಾಸ್ ಇಡ್ಲಿ(35), ಮುಶ್ತಾಕ್ ಅಹ್ಮದ್(32), ಅದಿಲ್ ಪಾಷಾ(23) ಮಾಝ್ ಬೇಗ್(20) ಬಂಧಿತ ಆರೋಪಿಗಳಾಗಿದ್ದು, ಪೊಲೀಸರು ದಾಳಿ ನಡೆಸಿದ ವೇಳೆ ಓರ್ವ ಪರಾರಿಯಾಗಿದ್ದಾನೆ .

ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಬಳಿಯ ಎಗ್ಸಿಬಿಷನ್ ಗ್ರೌಂಡ್ ಬಳಿ ಓಡಾಡುತ್ತಿರುವವರನ್ನು ಅಡ್ಡಗಟ್ಟಿ ಮಾರಕಾಸ್ತ್ರ ತೋರಿಸಿ ಖಾರದ ಪುಡಿ ಎರಚಿ ಚಿನ್ನಾಭರಣ ದೋಚಲು ಆರೋಪಿಗಳು ಹೊಂಚು ಹಾಕಿದ್ದರು ಎಂದು ಆರೋಪಿಸಲಾಗಿದೆ.

ಆರೋಪಿಗಳ ಬಳಿಯಿಂದ ರಾಡ್, ಲಾಂಗ್ ಮತ್ತು ಚಾಕು ಹಾಗೂ 50 ಗ್ರಾಂ ಖಾರದ ಪುಡಿ, 2 ಮೊಬೈಲ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version