2:44 AM Saturday 24 - January 2026

“ಸೋಲಿಸಿದರೆ ಎಲ್ಲ ರದ್ದು ಮಾಡುತ್ತೇನೆ” ಎಂದಿದ್ದ ಗಂಗಮ್ಮ ಗೆದ್ದಿದ್ದಾರಾ? ಸೋತಿದ್ದಾರಾ?

31/12/2020

ತುಮಕೂರು:  ಹೆಬ್ಬೂರು ಗ್ರಾಮ ಪಂಚಾಯತ್ ನ ಕಲ್ಕರೆಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಎಚ್. ಗಂಗಮ್ಮ, ತಮ್ಮ ವಿಭಿನ್ನ  ಪ್ರಣಾಳಿಕೆಯಿಂದ  ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಗೆದ್ದರೆ ಮತ್ತು ಸೋತರೆ ತಾನು ಏನೇನು ಕೆಲಸ ಮಾಡುತ್ತೇನೆ ಎಂದು ಅವರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದರು.

ಸೋತರೆ ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರೇಷನ್‌ ಕಾರ್ಡ್‌ ರದ್ದು ಮಾಡಿಸುವುದು, ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ಹಣ ಪಡೆಯುತ್ತಿರುವ 40 ಕುಟುಂಬಗಳ ಫೆಕ್ಷನ್‌ ಮೈತ್ರಿ, ಮನಸ್ವಿನಿ, ವಿಧವಾ ವೇತನ ಯೋಜನೆಯ ಹಣವನ್ನು ನಿಲ್ಲಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದರು.

ಆದರೆ ಇದೀಗ ಅವರು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದು, ಕಲ್ಕೆರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಂಗಮ್ಮ ಎರಡು ಮತಗಳನ್ನು ಪಡೆದಿದ್ದಾರೆ.  ಅವರ ಎದುರು ಸ್ಪರ್ಧಿಸಿದ್ದ ಟಿ.ಎಂ.ತಿಮ್ಮೇಗೌಡ 453 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಸೋತರೆ ನಾನು ಒಳ್ಳೆಯ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಕ್ಕಾಗಿ ಮತದಾರರು ಸೋಲಿಸಿದ್ದಾರೋ ಗೊತ್ತಿಲ್ಲ. ಅಂತೂ ಗಂಗಮ್ಮ ಅವರು ಚುನಾವಣೆಯಲ್ಲಿ ಗೆಲ್ಲದಿದ್ದರೂ ರಾಜ್ಯಾದ್ಯಂತ ಪ್ರಚಾರ ಆಗಿದ್ದಾರೆ. ಪಂಚಾಯತ್ ವ್ಯಾಪ್ತಿಯಲ್ಲಿ ಏನೇನು ಅಕ್ರಮಗಳು ನಡೆಯುತ್ತವೆ ಎನ್ನುವುದನ್ನು ಗಂಗಮ್ಮತಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತಾಗಿದೆ ಎಂಬಂತಹ ಅಭಿಪ್ರಾಯಗಳು ಸದ್ಯ ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ

Exit mobile version