ಮಳೆಯಲ್ಲಿ ವಾಹನಗಳಲ್ಲೇ ನಡೆದ ಗೌರಿ ಗಣೇಶ–ಈದ್ ಮಿಲಾದ್ ಪಥಸಂಚಲನ

ಕೊಟ್ಟಿಗೆಹಾರ: ಗೌರಿ ಗಣೇಶ್ ಹಾಗೂ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಕೊಟ್ಟಿಗೆಹಾರ ಪಟ್ಟಣದಲ್ಲಿ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಪಥಸಂಚಲನ ಜರುಗಿತು.
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಅವರ ಮಾರ್ಗದರ್ಶನದಲ್ಲಿ ನಡೆದ ಈ ಪಥಸಂಚಲನದಲ್ಲಿ ಮೂಡಿಗೆರೆ ಸರ್ಕಲ್ ಇನ್ಸ್‌ಪೆಕ್ಟರ್, ಮೂಡಿಗೆರೆ, ಗೋಣಿಬೀಡು, ಬಣಕಲ್ ಹಾಗೂ ಬಾಳೂರು ಠಾಣೆಗಳ ಉಪನಿರೀಕ್ಷಕರು (ಎಸ್‌ಐಗಳು) ತಮ್ಮ ಸಿಬ್ಬಂದಿಯೊಂದಿಗೆ ಪಾಲ್ಗೊಂಡರು.
ಮಳೆಯ ಪರಿಣಾಮವಾಗಿ ಸಾಮಾನ್ಯ ಮೆರವಣಿಗೆಯ ಬದಲು ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನಗಳಲ್ಲೇ ಕೂತು ಪಥಸಂಚಲನ ನಡೆಸಿದರು. ಹಬ್ಬಗಳನ್ನು ಎಲ್ಲ ಧರ್ಮದವರು ಒಗ್ಗಟ್ಟಿನಿಂದ ಆಚರಿಸಬೇಕು ಎಂಬ ಸೌಹಾರ್ದ ಸಂದೇಶವನ್ನು ಪೊಲೀಸರು ಹಂಚಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD