12:47 AM Thursday 21 - August 2025

ನೀರು, ಆಹಾರಕ್ಕಾಗಿ ಗಾಝಾದ ಮಕ್ಕಳ ಅಲೆದಾಟ: ಯುಎನ್ಆರ್ ಡಬ್ಲ್ಯೂಎ ವರದಿಯಲ್ಲಿ ಮನ ಕಲಕುವ ಅಂಶ ಬಹಿರಂಗ

08/07/2024

ಕುಡಿಯುವ ನೀರು ಮತ್ತು ಆಹಾರಕ್ಕಾಗಿ ಗಾಝಾದ ಮಕ್ಕಳು ಆರರಿಂದ ಎಂಟು ಗಂಟೆಯವರೆಗೆ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ವಿಶ್ವಸಂಸ್ಥೆಯ ಏಜೆನ್ಸಿಯಾಗಿರುವ ಯುಎನ್ಆರ್ ಡಬ್ಲ್ಯೂಎ ವರದಿ ತಿಳಿಸಿದೆ. ಕೆಲವು ಸಂದರ್ಭಗಳಲ್ಲಿ ಈ ಮಕ್ಕಳು ಬಹು ದೂರ ಸಾಗಿ ಇವುಗಳನ್ನು ಸಂಗ್ರಹಿಸಬೇಕಾಗಿದೆ ಎಂದು ಕೂಡ ವರದಿ ತಿಳಿಸಿದೆ. ಅಲ್ಲದೆ ಶುಚಿತ್ವವನ್ನು ಕಾಪಾಡಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಎದುರಾಗಿದೆ ಎಂದು ಏಜೆನ್ಸಿ ತಿಳಿಸಿದೆ.

ನೀರಿನ ಅಭಾವ ಎಷ್ಟರ ಮಟ್ಟಿಗೆ ಇದೆ ಎಂದರೆ ಸಮುದ್ರದ ನೀರನ್ನು ಕುಡಿಯಲು, ಸ್ನಾನ ಮಾಡಲು ಸಹಿತ ಎಲ್ಲದಕ್ಕೂ ಉಪಯೋಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಗಾಝಾದ ಮಕ್ಕಳು ಪೌಷ್ಟಿಕ ಆಹಾರದ ಬಹಳ ದೊಡ್ಡ ಕೊರತೆಯನ್ನು ಎದುರಿಸುತ್ತಿದ್ದಾರೆ. ಅನೇಕ ಮಕ್ಕಳು ಆಹಾರ ಸಿಗದೇ ಸಾವಿಗೀಡಾಗುತ್ತಿದ್ದಾರೆ.

ಇದಲ್ಲದೆ ತೀವ್ರ ಚರ್ಮರೋಗಕ್ಕೂ ಮಕ್ಕಳು ತುತ್ತಾಗುತ್ತಿದ್ದಾರೆ ಎಂದು ವಿಶ್ವ ಸಂಸ್ಥೆಯ ಏಜೆನ್ಸಿ ತಿಳಿಸಿದೆ. ಗಾಝಾದ ಮೇಲಿನ ಇಸ್ರೇಲ್ ದಾಳಿಗೆ 275 ದಿನಗಳು ಕಳೆದಿದ್ದು 87 ಸಾವಿರಕ್ಕಿಂತಲೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 38,000 ಕ್ಕಿಂತಲೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version