ಇಸ್ರೇಲ್ ಗೆ ಭಾರೀ ಮುಖಭಂಗ: ಫೆಲೆಸ್ತೀನ್‌ಗೆ ನೆರವು ನೀಡ್ತೀನಿ ಎಂದ ಜರ್ಮನಿ

24/04/2024

ಇಸ್ರೇಲ್ ಗೆ ಭಾರೀ ಮುಖಭಂಗ ಎದುರಾಗಿದೆ. ಫೆಲೆಸ್ತೀನ್ ಗೆ ನೆರವನ್ನು ಒದಗಿಸುವ ವಿಶ್ವಸಂಸ್ಥೆಯ ಯುಎನ್ಆರ್ ಡಬ್ಲ್ಯೂಎ ಗೆ ತಾನು ಹಣಕಾಸಿನ ನೆರವು ನೀಡುವುದನ್ನು ಪುನರಾರಂಭಿಸುವುದಾಗಿ ಜರ್ಮನಿ ಹೇಳಿದೆ. ಇಸ್ರೇಲ್ ನಡೆಸಿದ ಸುಳ್ಳು ಪ್ರಚಾರವನ್ನು ನಂಬಿಕೊಂಡು ಜರ್ಮನಿ ಸಹಿತ 15 ಯುರೋಪಿಯನ್ ರಾಷ್ಟ್ರಗಳು ವಿಶ್ವಸಂಸ್ಥೆಯ ಏಜೆನ್ಸಿಯಾದ ಯುಎನ್ಆರ್ ಡಬ್ಲ್ಯೂಎ ಗೆ ಧನಸಹಾಯ ನೀಡುವುದನ್ನು ನಿಲ್ಲಿಸಿತ್ತು.

ಇಸ್ರೇಲ್ ಆರೋಪದ ಕುರಿತಂತೆ ತನಿಖೆ ನಡೆಸಲು ಮಾಜಿ ಫ್ರೆಂಚ್ ವಿದೇಶಾಂಗ ಸಚಿವೆ ಕ್ಯಾತರಿನ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿಯು ಇದೀಗ ತನ್ನ ವರದಿಯನ್ನು ಸಲ್ಲಿಸಿದ್ದು ಇಸ್ರೇಲ್ ನ ಆರೋಪ ಸುಳ್ಳು ಎಂದು ಹೇಳಿದೆ. ಈ ನೆಲೆಯಲ್ಲಿ ಗಾಝಕ್ಕೆ ತಕ್ಷಣ ನೆರವನ್ನು ಪುನರಾರಂಭಿಸುವುದಾಗಿ ಜರ್ಮನಿ ಹೇಳಿದೆ. ಫೆಲೆಸ್ತೀನ್ ನಲ್ಲಿ ಆರೋಗ್ಯ ಶಿಕ್ಷಣ ಮತ್ತು ಆಹಾರಕ್ಕೆ ಸಂಬಂಧಿಸಿ ಸುಮಾರು 70ಕ್ಕಿಂತಲೂ ಅಧಿಕ ವರ್ಷಗಳಿಂದ ವಿಶ್ವಸಂಸ್ಥೆಯ ಯು ಎನ್ ಆರ್ ಡಬ್ಲ್ಯೂ ಎ ಕೆಲಸ ಮಾಡುತ್ತಿದೆ. ಕಳೆದ ಆರು ತಿಂಗಳಿನಿಂದ ಗಾಜಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯ ನಡುವೆ 1948ರಲ್ಲಿ ಸ್ಥಾಪಿಸಲಾದ ಈ ಸಂಸ್ಥೆ ಜನರ ಪಾಲಿಗೆ ಏಕೈಕ ಆಧಾರ ಸ್ತಂಭವಾಗಿದೆ. ಜಗತ್ತಿನ ವಿವಿಧ ರಾಷ್ಟ್ರಗಳು ನೀಡುವ ಧನಸಹಾಯವನ್ನು ಪಡೆದುಕೊಂಡು ಈ ಸಂಸ್ಥೆಯು ಗಾಜಾದಲ್ಲಿ ಸೇವಾ ನಿರತವಾಗಿದೆ.

 

ಆದರೆ ಈ ಸಂಸ್ಥೆಯ ವಿರುದ್ಧ ಜನವರಿಯಲ್ಲಿ ಇಸ್ರೇಲ್ ಹಲವು ಸುಳ್ಳುಗಳನ್ನು ಹರಡಿತ್ತು. ಮುಖ್ಯವಾಗಿ ನವೆಂಬರ್ 7ರಂದು ಹಮಾಸ್ ನಡೆಸಿದ ದಾಳಿಯಲ್ಲಿ ಈ ಸಂಸ್ಥೆಯ 12 ಮಂದಿ ಉದ್ಯೋಗಿಗಳಿಗೆ ಪಾತ್ರ ಇದೆ ಎಂದು ಇಸ್ರೇಲ್ ಆರೋಪಿಸಿತ್ತು. ಆದರೆ ಇದೀಗ ಈ ಆರೋಪ ಸುಳ್ಳು ಎಂದು ಸಾಬೀತಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version