ಮತ್ತೆ ಏರಿಕೆಯಾದ ಚಿನ್ನದ ಬೆಲೆ: ನಿಮ್ಮ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?: ಇಲ್ಲಿದ ವಿವರ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಇಳಿಕೆಯ ಸೂಚನೆ ದೊರಕಿತ್ತು. ಆದರೆ ಇಂದು ಮತ್ತೆ ಚಿನ್ನದ ಬೆಲೆ ಏರಿಕೆಯಾಗಿದ್ದು, ಆಭರಣ ಪ್ರಿಯರಿಗೆ ಶಾಕ್ ನೀಡಿದೆ.
ಇದು ಮದುವೆ ಹಾಗೂ ಶುಭ ಕಾರ್ಯಕ್ರಮಗಳ ಸೀಸನ್ ಆಗಿದೆ. ಈ ಸೀಸನ್ ಮುಗಿಯುವ ಹಂತಕ್ಕೆ ಬರುತ್ತಿದೆ. ಆದರೂ ಚಿನ್ನ ಬೆಳ್ಳಿಯ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ. ನೀವೇನಾದರೂ ಚಿನ್ನ, ಬೆಳ್ಳಿ ಖರೀದಿ ಮಾಡಲು ಯೋಚಿಸಿದ್ದರೆ, ಚಿನ್ನ ಬೆಳ್ಳಿಯ ಎಷ್ಟಿದೆ ಎನ್ನುವುದನ್ನು ಇಲ್ಲಿ ತಿಳಿದುಕೊಳ್ಳಿ…
22 ಕ್ಯಾರೆಟ್ ಚಿನ್ನದ ಬೆಲೆ:
ಇಂದು 1 ಗ್ರಾಂ ಚಿನ್ನಕ್ಕೆ 6,665 ರೂ. ಇದೆ. ನಿನ್ನೆ 6,625 ರೂ ಇದ್ದು, ಈ ದರಕ್ಕೆ ಹೋಲಿಸಿದರೆ 40 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 53,320 ರೂ. ನೀಡಬೇಕು. ನಿನ್ನೆ 53,000 ರೂ ಇದ್ದು, ನಿನ್ನೆ ದರಕ್ಕೆ ಹೋಲಿಸಿದರೆ ಇಂದು 320 ರೂ. ಹೆಚ್ಚಾಗಿದೆ. 10 ಗ್ರಾಂ ಚಿನ್ನಕ್ಕೆ 66,650 ರೂ ಇದೆ. ನಿನ್ನೆ 66,250 ರೂ. ಇತ್ತು. ಈ ದರಕ್ಕೆ ಹೋಲಿಸಿದರೆ 400 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,66,500 ರೂ. ನೀಡಬೇಕು. ನಿನ್ನೆ 6,62,500 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 4,000 ರೂ. ಹೆಚ್ಚಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ:
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 7,271 ರೂ. ಇದೆ. ನಿನ್ನೆ 7,227 ರೂ. ಇದು ಈ ದರಕ್ಕೆ ಹೋಲಿಸಿದರೆ 44 ರೂ ಏರಿಕೆಯಾಗಿದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 58,168 ರೂ. ನೀಡಬೇಕು. ನಿನ್ನೆ 57,816 ರೂ. ಇದ್ದು ಈ ದರಕ್ಕೆ ಹೋಲಿಸಿದರೆ 352 ರೂ. ಹೆಚ್ಚಾಗಿದೆ. ಇಂದು 10 ಗ್ರಾಂ ಚಿನ್ನಕ್ಕೆ 72,710 ನೀಡಬೇಕು. ನಿನ್ನೆ 72,270 ರೂ. ಇದ್ದು, ಈ ದರಕ್ಕೆ ಹೋಲಿಸಿದರೆ 440 ರೂ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ಬೆಲೆ 7,27,100 ರೂ. ಇದೆ. ನಿನ್ನೆ 7,22,700 ರೂ ಇತ್ತು. ಈ ದರಕ್ಕೆ ಹೋಲಿಸಿದರೆ 4,400 ರೂ ಹೆಚ್ಚಾಗಿದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ):
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್‌ಗೆ 66,650 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 72,710 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ):
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,550 ರೂ. 24 ಕ್ಯಾರೆಟ್‌ಗೆ 73,690 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,650 ರೂ. 24 ಕ್ಯಾರೆಟ್‌ಗೆ 72,710 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,800 ರೂ. 24 ಕ್ಯಾರೆಟ್‌ಗೆ 72,860 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,650 ರೂ. 24 ಕ್ಯಾರೆಟ್‌ಗೆ 72,710 ರೂ. ಇದೆ. ಹೈದರಾಬಾದ್‌ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,650 ರೂ. ಇದ್ದರೆ, 24 ಕ್ಯಾರೆಟ್‌ಗೆ 72,710 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 66,650 ರೂ. 24 ಕ್ಯಾರೆಟ್‌ಗೆ 72,710 ರೂ. ಆಗಿದೆ.
ಬೆಳ್ಳಿ ದರ:
ಇಂದು ಬೆಳ್ಳಿ ದರವೂ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 83.60 ರೂ. ಇದೆ. 8 ಗ್ರಾಂಗೆ 668.80 ರೂ ಇದ್ದರೆ, 10 ಗ್ರಾಂಗೆ 836 ರೂ. ಇದೆ. 100 ಗ್ರಾಂಗೆ 8,360 ರೂ. ಹಾಗೂ 1 ಕಿಲೋಗೆ 83,600 ರೂ. ಬೆಲೆ ನಿಗದಿ ಆಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth