ಆಭರಣ ಪ್ರಿಯರಿಗೆ ಕೊಂಚ ನೆಮ್ಮದಿ: ಈ ದಿನ ಚಿನ್ನ, ಬೆಳ್ಳಿಯ ದರ ಎಷ್ಟಿದೆ?

ಬೆಂಗಳೂರು: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದು ಆಭರಣ ಪ್ರಿಯರಿಗೆ ಇನ್ನಿಲ್ಲದ ದಿಗಿಲು ಮೂಡಿಸಿತ್ತು. ಮದುವೆ ಕಾರ್ಯಕ್ರಮಕ್ಕೆ ಚಿನ್ನ ಖರೀದಿಸುವವರಿಗಂತೂ ತೀವ್ರ ಆತಂಕ ಎದುರಾಗಿತ್ತು. ಇದೇ ರೀತಿ ಚಿನ್ನದ ಬೆಲೆ ಏರಿಕೆಯಾದರೆ ಮುಂದೇನು ಮಾಡಬೇಕು ಎಂದು ಜನ ಯೋಚಿಸುವಂತಾಗಿತ್ತು. ಇದೀಗ ಇಂದು ಚಿನ್ನದ ಬೆಲೆ ಸ್ಥಿರವಾಗಿದ್ದು, ನಿನ್ನೆಯಷ್ಟೇ ಇಂದು ಬೆಲೆ ಇದೆ. ಈ ಮೂಲಕ ಚಿನ್ನದ ಬೆಲೆ ನಾಗಲೋಟಕ್ಕೆ ಬ್ರೇಕ್ ಬಿತ್ತೆ ಎಂದು ಜನ ತುಸು ನೆಮ್ಮದಿಪಡುವಂತಾಗಿದೆ. ಇಂದಿನ ಚಿನ್ನ ಬೆಳ್ಳಿ ದರ ಗಮನಿಸಿ…
22 ಕ್ಯಾರೆಟ್ ಚಿನ್ನದ ಬೆಲೆ:
ಇಂದು 1 ಗ್ರಾಂ ಚಿನ್ನಕ್ಕೆ 6,795 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 54,360 ರೂ. ನೀಡಬೇಕು. 10 ಗ್ರಾಂ ಚಿನ್ನಕ್ಕೆ 67,950 ರೂ ಇದೆ. ನಿನ್ನೆ 67,050 ರೂ. ಇದೆ. 100 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 6,79,500 ರೂ. ನೀಡಬೇಕು.
24 ಕ್ಯಾರೆಟ್ ಚಿನ್ನದ ಬೆಲೆ:
24 ಕ್ಯಾರೆಟ್ ಚಿನ್ನಕ್ಕೆ 1 ಗ್ರಾಂಗೆ 7,413 ರೂ. ಇದೆ. 8 ಗ್ರಾಂ ಚಿನ್ನ ಖರೀದಿ ಮಾಡುವುದಾದರೆ 59,304 ರೂ. ನೀಡಬೇಕು. ಇಂದು 10 ಗ್ರಾಂ ಚಿನ್ನಕ್ಕೆ 74,130 ನೀಡಬೇಕು. 100 ಗ್ರಾಂ ಚಿನ್ನದ ಬೆಲೆ 7,41,300 ರೂ. ಇದೆ.
ಕರ್ನಾಟಕದಲ್ಲಿ ಚಿನ್ನದ ಬೆಲೆ (10 ಗ್ರಾಂ):
ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರದಲ್ಲಿ ಇಂದು ಚಿನ್ನದ ಬೆಲೆ 22 ಕ್ಯಾರೆಟ್ ಗೆ 67,950 ರೂ. ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ 74,130 ರೂ. ಇದೆ. ಮೈಸೂರು, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಇದೇ ಬೆಲೆ ಇರಲಿದೆ. ಆದರೆ ಮಜೂರಿ, ಇತರೆ ಶುಲ್ಕ ಹಾಗೂ ಇನ್ನಿತರ ದರಗಳು ವಿವಿಧ ನಗರಗಳಲ್ಲಿ ವ್ಯತ್ಯಾಸವಿರಬಹುದು.
ಹೊರ ರಾಜ್ಯಗಳಲ್ಲಿ ಚಿನ್ನದ ದರ (10 ಗ್ರಾಂ):
ಚೆನ್ನೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 68,700 ರೂ. 24 ಕ್ಯಾರೆಟ್ ಗೆ 74,950 ರೂ. ಇದೆ. ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,950 ರೂ. 24 ಕ್ಯಾರೆಟ್ ಗೆ 74,130 ರೂ. ಇದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 68,100 ರೂ. 24 ಕ್ಯಾರೆಟ್ ಗೆ 74,280 ರೂ. ಇದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,950 ರೂ. 24 ಕ್ಯಾರೆಟ್ ಗೆ 74,130 ರೂ. ಇದೆ. ಹೈದರಾಬಾದ್ ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,950 ರೂ. ಇದ್ದರೆ, 24 ಕ್ಯಾರೆಟ್ ಗೆ 74,130 ರೂ. ಇದೆ. ಕೇರಳದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 67,950 ರೂ. 24 ಕ್ಯಾರೆಟ್ ಗೆ 74,130 ರೂ. ಆಗಿದೆ.
ಬೆಳ್ಳಿ ದರ:
ಇಂದು ಬೆಳ್ಳಿ ಏರಿಕೆಯಾಗಿದೆ. ಒಂದು ಗ್ರಾಂ ಬೆಳ್ಳಿಗೆ 85.50 ರೂ. ಇದೆ. 8 ಗ್ರಾಂಗೆ 684 ರೂ ಇದ್ದರೆ, 10 ಗ್ರಾಂಗೆ 855 ರೂ. ಇದೆ. 100 ಗ್ರಾಂಗೆ 8,550 ರೂ. ಹಾಗೂ 1 ಕಿಲೋಗೆ 85,500 ರೂ. ಬೆಲೆ ನಿಗದಿ ಆಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth