ಕಬಾಬ್ ಪ್ರಿಯರಿಗೆ ಸಿಹಿಸುದ್ದಿ: ಇನ್ನು ಮುಂದೆ ಕಬಾಬ್ ಗೆ ಕಲರ್ ಬಳಕೆ ನಿಷೇಧ

kabab
24/06/2024

ಬೆಂಗಳೂರು: ಕಾಟನ್ ಕ್ಯಾಂಡಿ ಹಾಗೂ ಗೋಬಿ ಮಂಚೂರಿ ತಯಾರಿಸಲು ಕಲರ್ ಬಳಕೆ ನಿಷೇಧದ ಬೆನ್ನಲ್ಲೇ ಇದೀಗ ಚಿಕನ್, ಫಿಶ್ ಹಾಗೂ ವೆಜ್ ಕಬಾಬ್‌ ಗೆ ಇನ್ನು ಮುಂದೆ ಕಲರ್ ಬಳಸುವಂತಿಲ್ಲ ಎಂದು ಕಲರ್ ಬ್ಯಾನ್ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಆದೇಶ ನೀಡಿದ್ದು, ಇದರಿಂದಾಗಿ ಸಾರ್ವಜನಿಕರ ಆರೋಗ್ಯಕ್ಕೆ ಒಂದು ಕೊಡುಗೆ ನೀಡಿದಂತಾಗಿದೆ.

ರಾಜ್ಯಾದ್ಯಂತ ಕಬಾಬ್, ಫಿಶ್ ಫ್ರೈಗಳಿಗೆ ಬೇಕಾಬಿಟ್ಟಿ ಕಲರ್ ಬಳಕೆ ಮಾಡಲಾಗುತ್ತಿತ್ತು. ಕೆಲವು ಹೊಟೇಲ್ ಗಳಲ್ಲಂತೂ ಕಬಾಬ್ ಗಳಿಗೆ ಹಾಕಿದ ಕಲರ್ ಕೈಯಲ್ಲಿ ಹಿಡಿದರೆ, ಒಂದು ದಿನವಾದರೂ ಆ ಕಲರ್ ಹೋಗದಂತಹ ಸ್ಥಿತಿಗಳಿತ್ತು. ಇದೀಗ ಕಬಾಬ್ ಗೆ ಕಲರ್ ಬಳಕೆ ನಿಷೇಧ ಮಾಡಿರುವುದರಿಂದ ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

ಕಬಾಬ್ ತಯಾರಿಕೆಯಲ್ಲಿ ಬಳಸುವ ಕಲರ್‌ನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಬಾಬ್‌ಗೆ ಕಲರ್ ಬಳಕೆ ಮಾಡುವಂತಿಲ್ಲ ಎಂದು ಸರ್ಕಾರ ಆದೇಶ ನೀಡಿದೆ. ರಾಜ್ಯದ 36 ಕಡೆಗಳಲ್ಲಿ ಕಬಾಬ್ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ನೀಡಲಾಗಿತ್ತು. ಇದ್ರಲ್ಲಿ ಯೆಲ್ಲೋ ಹಾಗೂ ಕಾರ್ಮೋಸಿನ್ ಮಾದರಿ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ಕಲರ್ ಬ್ಯಾನ್ ಮಾಡಿದೆ.

ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಈ ಹಿಂದೆ ಕಾಟನ್‌ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದ್ದು, ಇವುಗಳಲ್ಲಿ ಬಳಸುವ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕ ಇರುವುದು ಪತ್ತೆಯಾಗಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version