1:00 PM Thursday 4 - December 2025

ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಕರರಹಿತ 25,000 ಕಿಲೋ ಲೀಟರ್  ಡೀಸೆಲ್ ಹೆಚ್ಚುವರಿಯಾಗಿ ವಿತರಿಸಲು ಸರ್ಕಾರ ಆದೇಶ

fishing boats
23/02/2023

ಯಾಂತ್ರೀಕೃತ ಮೀನುಗಾರಿಕೆ ದೋಣಿಗಳಿಗೆ ಕರರಹಿತ 25,000 ಕಿಲೋ ಲೀಟರ್ ಡೀಸೆಲ್ 2022-23ನೇ ಸಾಲಿಗೆ ಹೆಚ್ಚುವರಿಯಾಗಿ ವಿತರಿಸಲು ಇಂದು ದಿನಾಂಕ 22-02-2023 ರಂದು ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಸರ್ಕಾರವು ಕರರಹಿತ ಡೀಸೆಲ್ ನ್ನು ಡೆಲಿವರಿ ಪಾಯಿಂಟ್ ನಲ್ಲಿ ವಿತರಿಸಲು ಆದೇಶಿಸಿದ್ದು, 2022 – 23ನೇ ಸಾಲಿಗೆ ಆರ್ಥಿಕ ವರ್ಷ ಏಪ್ರಿಲ್ ಮಾಹೆಯಿಂದ ಅನ್ವಯವಾಗುವಂತೆ ದೋಣಿಗಳಿಗೆ ವಾರ್ಷಿಕ ಕರರಹಿತ ಡೀಸೆಲ್ ಮಿತಿಯನ್ನು 1.50 ಲಕ್ಷ ಕಿಲೋ ಲೀಟರ್ ನಿಗದಿಪಡಿಸಿರುತ್ತದೆ. ಯಾಂತ್ರಿಕ ದೋಣಿಗಳಿಗೆ ನೀಡುತ್ತಿರುವ ಕರರಹಿತ ಡೀಸೆಲ್ ಕೋಟಾ ಡಿಸೆಂಬರ್ ಗೆ ಮುಗಿಯುತ್ತಿದ್ದು, ಸದ್ದರಿ ಕೋಟಾ ಸಾಕಾಗುತ್ತಿಲ್ಲವಾದ್ದರಿಂದ ಪ್ರಸ್ತುತ ನಿಗದಿಯಾಗಿರುವ ವಾರ್ಷಿಕ ಮಿತಿಯನ್ನು 1.50 ಲಕ್ಷ  ಕಿಲೋ ಲೀಟರ್ 2.00 ಲಕ್ಷ ಕಿಲೋ ಲೀಟರ್ ಗೆ ಹೆಚ್ಚಿಸಲು ಮನವಿ ಮಾಡಲಾಗಿತ್ತು. ಅಲ್ಲದೆ ಪ್ರತಿ ಮಾಹೆಗೆ ಸರಾಸರಿ 17500 ಕಿಲೋ ಲೀಟರ್ ಪ್ರಮಾಣ ಬೇಕಾಗಿದ್ದು, ಅದರಂತೆ ಫೆಬ್ರವರಿ ತಿಂಗಳಿನಿಂದ ಮಾರ್ಚ್ ವರೆಗೆ 2 ತಿಂಗಳಿಗೆ ಕನಿಷ್ಠ 35000 ಕಿಲೋ ಲೀಟರ್ ಪ್ರಮಾಣ ಬೇಕಾಗಿರುವುದರಿಂದ 25,000 ಕಿಲೋ ಲೀಟರ್ ಹೆಚ್ಚುವರಿಯಾಗಿ ಕರರಹಿತ ಡೀಸೆಲ್ ವಿತರಿಸಲು ಮನವಿ ಮಾಡಲಾಗಿತ್ತು.

ಮೀನುಗಾರರ ಈ ಪ್ರಮುಖ ಬೇಡಿಕೆಯನ್ನು ಈಡೇರಿಸಿದ ಮುಖ್ಯ ಮಂತ್ರಿಯವರಾದ ಬಸವರಾಜ್ ಬೊಮ್ಮಾಯಿ ಅವರಿಗೆ ಹಾಗೂ ಇದಕ್ಕಾಗಿ ಶ್ರಮಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಹಾಗೂ ಮೀನುಗಾರಿಕೆ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಎಸ್. ಅಂಗಾರ ಅವರಿಗೆ ಶಾಸಕ ಕೆ.ರಘುಪತಿ ಭಟ್ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version