ಇನ್ನಿಲ್ಲ: ಇಸ್ರೇಲ್ ದಾಳಿಯಲ್ಲಿ ಗಾಯಗೊಂಡಿದ್ದ ಹಮಾಸ್ ನಾಯಕನ ಮೊಮ್ಮಗಳು ಸಾವು

ಇಸ್ರೇಲ್ ನಡೆಸಿದ ಆಕ್ರಮಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹಮಾಸ್ ನಾಯಕ ಇಸ್ಮಾಯಿಲ್ ಹನಿಯ್ಯ ಅವರ ಮೊಮ್ಮಗಳು ಮೃತಪಟ್ಟಿದ್ದಾಳೆ. ಈದ್ ದಿನದಂದು ಇಸ್ರೇಲ್ ನಡೆಸಿದ ವಾಯು ದಾಳಿಯಲ್ಲಿ ಹತ್ಯೆಗೀಡಾಗಿದ್ದ ಇಸ್ಮಾಯಿಲ್ ಹನಿಯ್ಯ ಅವರ ಮಗನ ಮಗಳು ಈ ಮಲಕ್.
ಈದ್ ದಿನದಂದು ನಿರಾಶ್ರಿತ ಕ್ಯಾಂಪ್ ಗೆ ಭೇಟಿ ನೀಡಲು ಬಂದಿದ್ದ ಇಸ್ಮಾಯಿಲ್ ಹನಿಯ್ಯ ಅವರ ಮಕ್ಕಳು ಮತ್ತು ಮೊಮ್ಮಕ್ಕಳಿದ್ದ ವಾಹನದ ಮೇಲೆ ಇಸ್ರೇಲ್ ವಾಯು ದಾಳಿ ನಡೆಸಿದ್ದು ಇದರಲ್ಲಿ ಅವರ ಮೂವರು ಮಕ್ಕಳು ಮತ್ತು ನಾಲ್ವರು ಮೊಮ್ಮಕ್ಕಳು ಮೃತಪಟ್ಟಿದ್ದರು. ಗಂಭೀರ ಗಾಯಗೊಂಡಿದ್ದ ಮಗಳು ಮಲಕ್ ಇದೀಗ ಮೃತಪಟ್ಟಿದ್ದಾಳೆ
ನನ್ನ ಮಕ್ಕಳ ರಕ್ತವು ನನ್ನ ಜನರ ರಕ್ತಕ್ಕಿಂತ ಹೆಚ್ಚಿನದಲ್ಲ ಎಂದು ಇಸ್ಮಾಯಿಲ್ ಹನಿಯ್ಯ ತನ್ನ ಮಕ್ಕಳ ಮತ್ತು ಮೊಮ್ಮಕ್ಕಳ ಸಾವಿಗೆ ಪ್ರತಿಕ್ರಿಸಿದ್ದರು ಮತ್ತು ಈ ಪ್ರತಿಕ್ರಿಯೆ ಜಾಗತಿಕವಾಗಿ ವೈರಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth