4:56 AM Wednesday 21 - January 2026

ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ  6 ವಾಹನಗಳ ನಡುವೆ ಸರಣಿ ಅಪಘಾತ

13/02/2021

ನವದೆಹಲಿ: ಉತ್ತರಪ್ರದೇಶ ಗ್ರೇಟರ್ ನೊಯ್ಡಾದ ಯಮುನಾ ಎಕ್ಸ್ ಪ್ರೆಸ್ ವೇಯಲ್ಲಿ 6 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಪರಿಣಾಮವಾಗಿ 12 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.

ರಸ್ತೆಯಲ್ಲಿ ದಟ್ಟ ಮಂಜು ಆವರಿಸಿದ ಕಾರಣದಿಂದಾಗಿ  ಒಂದು ವಾಹನಕ್ಕೆ ಇನ್ನೊಂದು ವಾಹನ ಸರಿಯಾಗಿ ಕಾಣದ ಕಾರಣ  ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.  ಗಾಯಗೊಂಡಿರುವ 12 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಧಾವಿಸಿದ್ದಾರೆ. ಅಪಘಾತದ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ಅದನ್ನು ಸರಿಪಡಿಸಲು  ಸಂಚಾರಿ ಪೊಲೀಸರು ಪರದಾಡುವಂತಾಗಿದೆ.

ಇತ್ತೀಚಿನ ಸುದ್ದಿ

Exit mobile version