ಮಹಾರಾಷ್ಟ್ರದಲ್ಲಿ ವಿಚಿತ್ರ ರೋಗದ ಹಾವಳಿ: ಅಸ್ವಸ್ಥತೆಯ‌ ಕಾಯಿಲೆಗೆ ಜೀವ ಬಲಿ

27/01/2025

ಗುಯಿಲಿನ್-ಬಾರ್ರೆ ಸಿಂಡ್ರೋಮ್ GBS ಎಂಬ ವಿಚಿತ್ರ ರೋಗದ ಲಕ್ಷಣಗಳು ಮಹಾರಾಷ್ಟ್ರದಲ್ಲಿ ಹೆಚ್ಚಾಗುತ್ತಿದೆ. ಜಿಬಿಎಸ್ ಅಪರೂಪದ ಸ್ವಯಂ ನಿರೋಧಕ ಅಸ್ವಸ್ಥತೆ ಕಾಯಿಲೆ ಆಗಿದ್ದೂ, ಇದು ವ್ಯಕ್ತಿಯೊಬ್ಬನ ನರಗಳ ಮೇಲೆ ದಾಳಿ ಮಾಡುತ್ತದೆ.

ಈ ಕಾಯಿಲೆ ವಿಪರೀತವಾದ ನಂತರ ನರಗಳ ಭಾಗ ಹಾನಿಗೊಳಿಸುತ್ತದೆ ಮತ್ತು ಸ್ನಾಯು ದೌರ್ಬಲ್ಯ, ಜುಮ್ಮೆನಿಸುವಿಕೆ, ನಿಶ್ಯಕ್ತಿ ಸೇರಿ ಪಾರ್ಶ್ವವಾಯುಗೆ ರೋಗಿ ತುತ್ತಾಗುತ್ತಾನೆ. ಇದೇ ರೋಗದ ಕಾರಣಕ್ಕೆ ಇದೀಗ ಮಹಾರಾಷ್ಟ್ರದಲ್ಲಿ ಮೊದಲ ಸಾವು ಸಂಭವಿಸಿದೆ.

ಮಹಾರಾಷ್ಟ್ರದಲ್ಲಿ ಕೆಲವೇ ದಿನಗಳಲ್ಲಿ ಈ ರೋಗದ ಲಕ್ಷಣ ಇರುವ 100ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಪುಣೆ ಮೂಲದ ಚಾರ್ಟರ್ಡ್ ಅಕೌಂಟೆಂಟ್ ಒಬ್ಬರು, ಜಿಬಿಎಸ್ ರೋಗಕ್ಕೆ ಬಲಿಯಾಗಿದ್ದಾರೆ.

ಇದೀಗ ಜಿಬಿಎಸ್ ರೋಗಕ್ಕೆ ಜೀವ ಕಳೆದುಕೊಂಡಿರುವ ವ್ಯಕ್ತಿ ಸೋಲಾಪುರದ ತಮ್ಮ ಹಳ್ಳಿಗೆ ಹೋಗಿ ಬಂದಿದ್ದರು. ಹೀಗೆ ಹಳ್ಳಿಯಿಂದ ಬಂದ ನಂತರ ಅತಿಸಾರದಿಂದ ಬಳಲುತ್ತಿದ್ದರು. ಇದಕ್ಕೂ ಮೊದಲು ಶಂಕಿತ ಜಿಬಿಎಸ್ ಕಾಯಿಲೆಗೆ ವ್ಯಕ್ತಿಯು ಬಲಿಯಾಗಿದ್ದರೂ ಪ್ರಕರಣ ದೃಢವಾಗಿರಲಿಲ್ಲ, ಆದರೆ ಇದೀಗ ಜಿಬಿಎಸ್ ರೋಗಕ್ಕೆ ಮೊದಲ ಬಲಿ ಆಗಿದ್ದು ಭಯದ ವಾತಾವರಣ ಸೃಷ್ಟಿ ಮಾಡಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version