9:53 PM Saturday 24 - January 2026

ಐಸಿಯುನಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಯುವತಿಯ ಅತ್ಯಾಚಾರ | ಖಾಸಗಿ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ

29/10/2020

ಗುರುಗಾಂವ್: ಇಲ್ಲಿನ ಫೋರ್ಟೀಸ್ ಆಸ್ಪತ್ರೆ(ಸೆಕ್ಟರ್ 44)ಯಲ್ಲಿ ಕ್ಷಯ ರೋಗದ ಹಿನ್ನೆಲೆಯಲ್ಲಿ  ಚಿಕಿತ್ಸೆಗೆ ದಾಖಲಾಗಿದ್ದ 21 ವರ್ಷದ ಯುವತಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ಸಿಬ್ಬಂದಿ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ನಡೆದಿದೆ.


ಮಂಗಳವಾರ ಬೆಳಗ್ಗೆ ಸಂತ್ರಸ್ತ ಯುವತಿಗೆ ಪ್ರಜ್ಞೆ ಮರುಕಳಿಸಿದ್ದು, ಈ ವೇಳೆ ಆಕೆ ಘಟನೆಯನ್ನು ತನ್ನ ತಂದೆಗೆ  ಕೈಬರಹದ ಮೂಲಕ ತಿಳಿಸಿದ್ದಾಳೆ. ವೆಂಟಿಲೇಟರ್ ಬೆಂಬಲದೊಂದಿಗೆ ಉಸಿರಾಡುತ್ತಿದ್ದ ಯುವತಿಯ ಮೇಲೆ ಇಂತಹದ್ದೊಂದು ದೌರ್ಜನ್ಯವನ್ನು ಎಸಗಲಾಗಿದೆ.


ಅಕ್ಟೋಬರ್ 21ರಂದು ಯುವತಿ ಚಿಕಿತ್ಸೆಗೆ ದಾಖಲಾಗಿದ್ದಳು. ಅಕ್ಟೋಬರ್ 27ರಂದು ಯುವತಿಗೆ ಪ್ರಜ್ಞೆ ಬಂದಿದೆ. ಈ ನಡುವೆ ಯುವತಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಹಾಯಕ ಪೊಲೀಸ್ ಆಯುಕ್ತೆ ಉಷಾ ಖಂಡು ತಿಳಿಸಿದ್ದಾರೆ.


ವೈದ್ಯಕಿಯೇತರ ಹೊರಗುತ್ತಿಗೆ ಸಿಬ್ಬಂದಿ ವಿಕಾಸ್ ಅತ್ಯಾಚಾರ ನಡೆಸಿದ ವ್ಯಕ್ತಿ ಎಂದು ಯುವತಿ ಗುರುತಿಸಿದ್ದಾಳೆ. ಈಗಾಗಲೇ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ದಾಖಲಿಸಿಕೊಂಡಿದ್ದು,  ಆರೋಪಿಯನ್ನು ಬಂಧಿಸುವ ಮೊದಲು ಎಲ್ಲ ವಿಚಾರಗಳನ್ನು ದೃಢಪಡಿಸಿಕೊಂಡು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.


ಇತ್ತೀಚಿನ ಸುದ್ದಿ

Exit mobile version