ಗುರುವಾಯೂರು ದೇವಸ್ಥಾನದ ಆನೆಗಳಿಗೆ ಚಿತ್ರಹಿಂಸೆ: ಹೈಕೋರ್ಟ್ ಕಿಡಿ

guruvayur
10/02/2024

ತಿರುವನಂತಪುರಂ: ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದ ಆನೆ ಬಿಡಾರದಲ್ಲಿ ಎರಡು ಆನೆಗಳಿಗೆ ಮಾವುತರು ಚಿತ್ರಹಿಂಸೆ ನೀಡಿರುವ ಘಟನೆಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್  ಸರ್ಕಾರವನ್ನು ತರಾಟೆಗೆತ್ತಿಕೊಂಡಿದೆ.

ಕೃಷ್ಣ ಹಾಗೂ ಕೇಶವನ್ ಎಂಬ ಎರಡು ಆನೆಗೆ ಮಾವುತರು ಚಿತ್ರ ಹಿಂಸೆ ನೀಡಿದ್ದು, ಈ ವಿಡಿಯೋ  ಗಮನಿಸಿರುವ ಹೈಕೋರ್ಟ್ ಸುಮೋಟೋ ಕೇಸ್ ದಾಖಲಿಸಿ ವಿಚಾರಣೆ ನಡೆಸಲು ಸೂಚನೆ ನೀಡಿದೆ.

ಆನೆಗಳಿಗೆ ಚಿತ್ರಹಿಂಸೆ ನೀಡಿದ ಮಾವುತರ ವಿರುದ್ಧ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಮಾವುತರ ಪರವಾನಗಿ ರದ್ದು ಮಾಡುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದೆ.

ಹೈಕೋರ್ಟ್ ಸೂಚನೆಯಂತೆ ಅರಣ್ಯಾಧಿಕಾರಿಗಳು ಗುರುವಾಯೂರು ಆನೆ ಬಿಡಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಆನೆಗಳ ಮಾವುತರ ಪರವಾನಗಿ ರದ್ದು ಮಾಡುವುದು ಕಷ್ಟ ಎಂದು ಹೇಳಲಾಗುತ್ತಿದೆ. ಮಾವುತರ ಪರವಾನಗಿ ರದ್ದು ಮಾಡಿದರೆ, ಆನೆಗಳ ಯೋಗಕ್ಷೇಮ ನೋಡಿಕೊಳ್ಳುವುದು ಸಾಧ್ಯವಿಲ್ಲ ಎನ್ನಲಾಗಿದೆ.

ಇತ್ತೀಚಿನ ಸುದ್ದಿ

Exit mobile version