11:05 PM Thursday 21 - August 2025

‘ಪೆನ್ ಡ್ರೈವ್ ಬ್ರದರ್ʼ: ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಮತ್ತೊಂದು ಪೋಸ್ಟರ್ ವಾರ್!

poster
21/11/2023

ಬೆಂಗಳೂರು: ಕರೆಂಟ್ ಕಳ್ಳ ಎಂದು ವ್ಯಂಗ್ಯ ಆರೋಪ ಹೊತ್ತಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ  ಪೋಸ್ಟರ್ ವಾರ್ ಮುಂದುವರೆದಿದ್ದು, ಮುಂದುವರಿದ ಭಾಗವಾಗಿ ಕರೆಂಟ್ ಕಳ್ಳ ಖ್ಯಾತಿಯ ಹೆಚ್ ಡಿಕೆ ನಿರ್ಮಾಣದ ‘ಪೆನ್ ಡ್ರೈವ್ ಬ್ರದರ್’ ಚಿತ್ರ ಬಿಡುಗಡೆಯಾಲಿದೆ ಎಂಬ ಪೋಸ್ಟರ್ ಅಂಟಿಸಲಾಗಿದೆ.

ನಗರದ ಶೇಷಾದ್ರಿಪುರ ರಸ್ತೆ, ರಾಜಾಜಿನಗರ, ಶಿವಾನಂದ ಸರ್ಕಲ್ ಸೇರಿದಂತೆ ವಿವಿಧೆಡೆ ಪೋಸ್ಟರ್ ಅಂಟಿಸಲಾಗಿದೆ. ಈ ಪೋಸ್ಟರ್ ಅನ್ನು ಅಂಟಿಸಿದವರು ಯಾರು ಎನ್ನುವುದು ತಿಳಿದು ಬಂದಿಲ್ಲ.

ಕರೆಂಟ್ ಕಳ್ಳ ಖ್ಯಾತಿಯ ಹೆಚ್ಡಿಕೆ ನಿರ್ಮಾಣದ ಚಿತ್ರ ‘ಪೆನ್ ಡ್ರೈವ್ ಬ್ರದರ್. ಪ್ರಾಮಾಣಿಕ ಕರೆಂಟ್ ಕಳ್ಳ ಖ್ಯಾತಿಯ ನಿರ್ದೇಶನ, ರಾಧಾ, ಕುಮಾರ, ಬ್ಲೂ ಬಾಯ್ಸ್ ಚಿತ್ರ ಮಂದಿರಗಳಲ್ಲಿ ಬಿಡುಗಡೆ. ಬರೀ ಟೀಸರ್ಗೆ ಇಷ್ಟೊಂದು ಟೆನ್ಷನ್ ಆದ್ರೆ ಹೇಗೆ? ಪಿಚ್ಚರ್ ಅಭೀ ಬಾಕಿಯಿದೆ. ಚಿತ್ರದ ನಿರ್ಮಾಣದ ವೆಚ್ಚ 68,000 ರೂಪಾಯಿ ದಂಡ ಎಂದು ವ್ಯಂಗ್ಯ ಮಾಡಲಾಗಿದೆ.

ಇತ್ತೀಚಿನ ಸುದ್ದಿ

Exit mobile version