ಹಾಸನ ವಿಚಾರಕ್ಕೆ ಬೇಸರ ವ್ಯಕ್ತಪಡಿಸಿದ ಹೆಚ್.ಡಿ.ದೇವೇಗೌಡ!

ಹಾಸನ: ಮೈತ್ರಿ ನಾಯಕರ ವರ್ತನೆಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬೇಸರ ವ್ಯಕ್ತಪಡಿಸಿದ್ದು, ಹಾಸನ ಹಾಗೂ ಮಂಡ್ಯದಲ್ಲಿ ಮೈತ್ರಿ ನಾಯಕರು ಕೋ—ಆಪರೇಟ್ ಮಾಡ್ತಾ ಇಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದಲ್ಲಿ ಕೆಲವು ವ್ಯಕ್ತಿಗಳು ಕೋ—ಆಪರೇಟ್ ಮಾಡ್ತಿಲ್ಲ, ಮಂಡ್ಯದಲ್ಲಿ ಸುಮಲತಾ ಅವರು ಕುಮಾರಸ್ವಾಮಿಗೆ ಕೋ—ಆಪರೇಟ್ ಮಾಡ್ತಾ ಇಲ್ಲ, ಸುಮಲತಾ ಪ್ರಚಾರ ಮಾಡದಿದ್ದರೂ ಕುಮಾರಸ್ವಾಮಿಗೆ ಯಾವುದೇ ಅಪಾಯವಿಲ್ಲ ಎಂದು ಅವರು ಹೇಳಿದರು.
ಹಾಸನ ಕ್ಷೇತ್ರದಲ್ಲಿ ಬಿಜೆಪಿಯ ಒಬ್ಬರು ವಿರೋಧ ಮಾಡ್ತಾರೆ ಅಂತ ನೀವು ಹೇಳಬಹುದು. ಆದ್ರೆ ಕಾವೇರಿ ಬೇಸಿನ್ ನಲ್ಲಿ ಎಲ್ಲ ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ದೇವೇಗೌಡರು ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಸುಮಲತಾ ಅವರು ಕುಮಾರಸ್ವಾಮಿಗೆ ಕೋ—ಆಪರೇಟ್ ಮಾಡ್ತಿಲ್ಲ, ಆದರೆ ಕುಮಾರಸ್ವಾಮಿಗೆ ಏನೋ ಅಪಾಯವಾಗುತ್ತದೆ ಅಂತ ನೀವು ಹೇಳಬಹುದು, ಆದರೆ ಏನೂ ಆಗಲ್ಲ ಎಂದು ದೇವೇಗೌಡರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth